ತಾಲಿಬಾನಿಗಳಿಗಿಂತ ಭಾರತದಲ್ಲಿರೋ ಅವರ ಬೆಂಬಲಿಗರು ಬಹಳ ಡೇಂಜರ್: ಸೂಲಿಬೆಲೆ

Public TV
1 Min Read
Chakravarti Sulibele

ಶಿವಮೊಗ್ಗ : ಅಫ್ಘಾನಿಸ್ತಾನದ ಪರಿಸ್ಥಿತಿ ನೋಡಿದರೆ ಇದು ಭಾರತಕ್ಕಷ್ಟೇ ಅಲ್ಲ, ಇಡೀ ಜಗತ್ತಿಗೆ ಭಯಾನಕ ಸಂಗತಿಯಾಗಿದೆ. ಇಸ್ಲಾಂ ಉಗ್ರವಾದಿಗಳು ಕೇವಲ ಭಾರತ, ಚೀನಾ, ರಷ್ಯಾದಲ್ಲಿ ಇಲ್ಲ. ಬದಲಿಗೆ ಯುರೋಪಿಯನ್ ಯೂನಿಯನ್‍ನಲ್ಲು ಇದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನ ವಶಪಡಿಸಿಕೊಂಡಿರುವುದು ಜಗತ್ತಿನ ಮೂಲೆ ಮೂಲೆಯಲ್ಲಿ ಇರುವ ಉಗ್ರವಾದಿಗಳಿಗೆ ಜೀವ ಬಂದಂತಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಶಿವಮೊಗ್ಗದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಭಾರತದಲ್ಲಿ ಇಸ್ಲಾಂ ಉಗ್ರವಾದಿಗಳಿಗೆ ಏನು ಕೊರತೆ ಇಲ್ಲ. ಭಾರತದಲ್ಲಿ ಜಿಹಾದಿಗಳದ್ದು ಅಷ್ಟೇ ಸಮಸ್ಯೆ ಇಲ್ಲ. ಧರ್ಮ ಪ್ರಚಾರಕರು, ಮಾಹೋವಾದಿಗಳ ಸಮಸ್ಯೆ ಸಹ ಇದೆ. ಈ ಮೂವರು ಒಟ್ಟಾಗಿ ಇರುವುದರಿಂದ ಸಮಸ್ಯೆ ಕಾಡುತ್ತದೆ. ಈಗಾಗಿಯೇ ತಾಲಿಬಾನಿಗಳಿಗಿಂತ ಭಾರತದಲ್ಲಿರುವ ತಾಲಿಬಾನಿಗಳ ಬೆಂಬಲಿಗರು ಬಹಳ ಡೇಂಜರ್ ಎಂದರು. ಇದನ್ನೂ ಓದಿ:  ಕತ್ರಿನಾ, ವಿಕ್ಕಿ ಎಂಗೇಜ್ಮೆಂಟ್ ಸೀಕ್ರೆಟ್

Chakravarti Sulibele

ಈ ಭಯೋತ್ಪಾದಕ ಸಂಘಟನೆಗಳನ್ನು ಎದುರಿಸುವ ಕೆಲಸವನ್ನು ಕೇವಲ ಪ್ರಧಾನ ಮಂತ್ರಿ ಅಥವಾ ಮಂತ್ರಿಗಳು ಅಷ್ಟೇ ಮಾಡದೇ, ಇಡೀ ದೇಶದ ಜನತೆ ಇದರ ವಿರುದ್ಧ ಜಾಗೃತರಾಗಿ ಎದುರಿಸಬೇಕಿದೆ. ಹೀಗಾಗಿಯೇ ತಾಲಿಬಾನಿಗಳಿಗೆ ಭಯ ಪಡುವುದಕ್ಕಿಂತ, ಭಾರತದಲ್ಲಿರುವ ತಾಲಿಬಾನಿಗಳಿಗೆ ಬೆಂಬಲಿಸುವವರಿಗೆ ಭಯಪಡುವಂತಹ ವಾತಾವರಣ ಸೃಷ್ಟಿಯಾಗಿದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೊಂದ ಮಹಿಳೆಯರ ಧ್ವನಿಯಾಗಿರುವ ಸಾಂತ್ವನ ಕೇಂದ್ರಗಳನ್ನು ಮುಂದುವರಿಸಿ – ಸಿಎಂಗೆ ಮನವಿ

 

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಆರಂಭದಿಂದಲೇ ಇಂತಹ ಭಯೋತ್ಪಾದಕ ದುಷ್ಕøತ್ಯದಲ್ಲಿ ತೊಡಗಿರುವವನ್ನು ಚಿವುಟಿ ಹಾಕುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿಯೇ ಮೋದಿ ಅವರು ಆರ್ಟಿಕಲ್ 370 ಜಾರಿಗೆ ತಂದರು. ಆರ್ಟಿಕಲ್ 370 ರದ್ದಾಗಿದ್ದರಿಂದ ಕಾಶ್ಮೀರದಲ್ಲಿ ತಿರಂಗ ಧ್ವಜ ಹಾರಾಟ ನಡೆಸುತ್ತಿದೆ. ಒಂದು ವೇಳೆ ಆರ್ಟಿಕಲ್ 370 ರದ್ದಾಗದಿದ್ದರೆ ಕಾಶ್ಮೀರದಲ್ಲಿ ದೆವ್ವಗಳು ಎದ್ದೆದ್ದು ಕುಣಿಯುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಮೇಲೆ ವಿಶ್ವಾಸ ಇಡೋಣ. ಅವರ ನೇತೃತ್ವ ನಮ್ಮನ್ನು ಎಲ್ಲಾ ಸಂದರ್ಭದಲ್ಲು ರಕ್ಷಣೆ ಮಾಡಿದೆ. ಈಗಲೂ ರಕ್ಷಣೆ ಮಾಡುತ್ತದೆ ಎಂಬ ವಿಶ್ವಾಸ ಖಂಡಿತ ಇದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *