ಬೆಂಗಳೂರು: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡುತ್ತಿದೆ. ಸರ್ಕಾರ ಕೂಡಲೇ ಖಟ್ಟರ್ ಮುಸ್ಲಿಂ ಮೂಲಭೂತವಾದಿಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಲಾಲ್ ಎನ್ನುವುದು ಮಾಂಸಕ್ಕೆ ಸೀಮಿತವಾಗದೇ ಎಲ್ಲಾ ಕಡೆ ವ್ಯಾಪಿಸಿದೆ. ದೇವರ ಪೂಜೆಗೆ ಬಳಸುವ ಅರಿಶಿಣ, ಕುಂಕುಮಕ್ಕೆ, ಜೇನು ತುಪ್ಪಕ್ಕೂ ಹಲಾಲ್ ಸರ್ಟಿಫಿಕೇಟ್ ಬಂದಿದೆ. ಪ್ರೈವೇಟ್ ಕೆಲಸಗಳಲ್ಲಿ ಮುಸ್ಲಿಂರೇ ಕೆಲಸದಲ್ಲಿ ಇರಬೇಕು ಎನ್ನುವ ಮನಸ್ಥಿತಿಯಲ್ಲಿದ್ದಾರೆ. ಈಗಾಗಲೇ ಹಲಾಲ್ ಕಾನೂನು ರೂಪವನ್ನು ಪಡೆದುಕೊಂಡಿದೆ. ಎಲ್ಲದಕ್ಕೂ ಹಲಾಲ್ ಸರ್ಟಿಫಿಕೇಟ್ ಎನ್ನುವುದು ಹಾಗೂ ಅನ್ಯ ಧರ್ಮಿಯರ ಮೇಲೆ ಹೇರುವುದು ಸಂವಿಧಾನದ ವಿರೋಧಿ ನಡೆ. ಈ ಹಿಂದೆ ಇಸ್ಕಾನ್ ಈರುಳ್ಳಿ, ಬೆಳ್ಳುಳ್ಳಿ ರಹಿತ ಊಟ ಕೊಡುವಾಗ ಅದನ್ನು ಮುಸಲ್ಮಾನರು ವಿರೋಧಿಸಿದ್ದರು. ಆದರೆ ಈಗ ಹಲಾಲ್ ಸರ್ಟಿಫಿಕೇಟ್ ಬ್ಯುಸಿನೆಸ್ ವ್ಯಾಪಕವಾಗುತ್ತಿದೆ. ಇದನ್ನೂ ಓದಿ: ಸದನದಲ್ಲಿ ಗದ್ದಲವೆಬ್ಬಿಸಿದ ಶಾಸಕರನ್ನು ಹೊತ್ತು ತಂದು ಹೊರಹಾಕಿದ ಮಾರ್ಷಲ್‍ಗಳು
ಈ ಹಲಾಲ್ ಸರ್ಟಿಫಿಕೇಟ್ ವಿರುದ್ಧ ಕಾನೂನು ಹೋರಾಟ ಆಗಲೇಬೇಕಿದೆ. ಮುಸ್ಲಿಮರ ಹಲಾಲ್ ಮನಸ್ಥಿತಿ ಬದಲಾಗಬೇಕು. ಇಲ್ಲ ಅದರ ವಿರುದ್ಧ ಕಾನೂನು ತರುವ ಕೆಲಸ ಆಗಬೇಕಿದೆ. ಮಲೇಷ್ಯಾದಲ್ಲಿ ಇಸ್ಲಾಂ ಬ್ಯಾಂಕಿಂಗ್ ತಂದು, ಎಲ್ಲದಕ್ಕೂ ಸರ್ಟಿಫಿಕೇಟ್ ತಂದರು. ಮುಂದೆ ಹಲಾಲ್ ಸರ್ಟಿಫಿಕೇಟ್ ತಗೆದುಕೊಂಡವರು ಇಸ್ಲಾಂ ಬ್ಯಾಂಕಿಂಗ್ ಮೂಲಕವೇ ವ್ಯವಹಾರ ಮಾಡಿ ಅಂತಾರೆ.
ಈ ರೀತಿ ಆದರೆ ಸಂಪೂರ್ಣ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ಈ ಹಲಾಲ್ ಸರ್ಟಿಫಿಕೇಟ್ ಹುನ್ನಾರ. ಶ್ರೀಮಂತ ಮುಸ್ಲಿಮರಿಗಾಗಿ ಬಡ ಮುಸ್ಲಿಮರ ಜೀವನ ಹಾಳು ಮಾಡುತ್ತಿದ್ದಾರೆ. ನಾವೆಲ್ಲ ಭಾರತದಲ್ಲಿ ಸೌಹರ್ದತೆಯಿಂದ ಬದುಕಿದ್ದೇವೆ. ಹಿಜಬ್‍ನಿಂದ ಹಿಡಿದು ಹಲಾಲ್‍ವರೆಗೂ ಬಂದು ನಿಂತಿದೆ. ದೇವಸ್ಥಾನ, ಜಾತ್ರೆಗಳಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ಕೊಡದೇ ಇರುವ ಕಾನೂನು ಕಾಂಗ್ರೆಸ್ ತಂದಿದ್ದು, ಕರ್ನಾಟಕದಲ್ಲಿಯೇ ಹಿಜಬ್, ಹಲಾಲ್ ವಿಚಾರಗಳು ಪ್ರಾರಂಭವಾಗುತ್ತಿವೆ. ಅದು ಇಡೀ ದೇಶಕ್ಕೆ ಹಬ್ಬುತ್ತಿದೆ. ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡುತ್ತಿದೆ. ಸರ್ಕಾರ ಕೂಡಲೇ ಖಟ್ಟರ್ ಮುಸ್ಲಿಂ ಮೂಲಭೂತವಾದಿಗಳಿಗೆ ಕಡಿವಾಣ ಹಾಕಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್ ನಾಯಕ್ ಸಂಸ್ಥೆ ಬ್ಯಾನ್