ಬೆಂಗಳೂರು: ಕಾಂಗ್ರೆಸ್ ಕಾಲದಲ್ಲೂ ಮರ್ಡರ್ ಆಗಿತ್ತು. ಅದನ್ನು ನಿಲ್ಲಿಸುವಂತೆ ಸಿದ್ದರಾಮಯ್ಯ ಸರ್ಕಾರ ಕೆಲಸ ಮಾಡಲಿಲ್ಲ. ಹಾಗಾಗಿ ಸಿದ್ದರಾಮಯ್ಯನವರಿಗೆ ಪ್ರಶ್ನಿಸುವ ಹಕ್ಕು ಇಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸರ್ಕಾರದ ಜವಾಬ್ದಾರಿ ಪ್ರಜೆಗಳಿಗೆ ರಕ್ಷಣೆ ಕೊಡುವುದು ಮೇಜರ್ ಜವಾಬ್ದಾರಿ. ಶಿಕ್ಷಣ ಕೊಡಿ, ಆರೋಗ್ಯ ಕೊಡಿ ಏನೇ ಕೊಟ್ಟರೂ ರಕ್ಷಣೆ ಇಲ್ಲ ಅಂತಾ ಆದರೆ ಅದು ಪ್ರಯೋಜನವಿಲ್ಲ. ಎಲ್ಲಾದರೂ ಮರ್ಡರ್ ಆಗಲಿ, ಹಿಂದೂ ಆಗಲಿ, ಮುಸ್ಲಿಂ ಆಗಲಿ , ಕ್ರಿಶ್ಚಿಯನ್ ಆಗಲಿ ರಕ್ಷಣೆ ಕೊಡಬೇಕು. ಕಳೆದ 2 ವರ್ಷಗಳಿಂದ ಇಡೀ ದೇಶಾದ್ಯಂತ ಈ ಮರ್ಡರ್ ಆಗುತ್ತಿದೆ. ಆದರೆ ಇದನ್ನು ಪ್ರಶ್ನೆ ಮಾಡುವ ನೈತಿಕ ಹಕ್ಕು ಕಾಂಗ್ರೆಸ್‍ಗೆ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
Advertisement
ಕಾಂಗ್ರೆಸ್ ಕಾಲದಲ್ಲೂ ಮರ್ಡರ್ ಆಗಿತ್ತು. ಕಾಂಗ್ರೆಸ್ ಕಾಲದಲ್ಲಿ 23 ಹತ್ಯೆ ಆಗಿದೆ. ಅದನ್ನು ನಿಲ್ಲಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡಲಿಲ್ಲ. ನೈತಿಕತೆ ಹಕ್ಕು ಇದೆ ಅಂದರೆ ಅದು ಸಾಮಾನ್ಯ ಜನಕ್ಕೆ ಮಾತ.್ರ ಸಿದ್ದರಾಮಯ್ಯನವರಿಗೆ ಪ್ರಶ್ನಿಸುವ ಹಕ್ಕು ಇಲ್ಲ. ಸಿದ್ದರಾಮಯ್ಯ ಅವರ ಕಾಲದ ಅರಾಜಕತೆಯನ್ನು ಹೋಗಲಾಡಿಸಲಿಕ್ಕೆ ಅವರನ್ನು ಕೆಳಗೆ ಇಳಿಸಿತ್ತು. ಸಿದ್ದರಾಮಯ್ಯ ಅವರಿಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹರಿಹಾಯ್ದಿದ್ದಾರೆ.
Advertisement
Advertisement
ರಕ್ಷಣೆಯ ದೃಷ್ಟಿಯಿಂದ ಈ ಸರ್ಕಾರದ ಮೇಲೆ ಹಲವಾರು ಪ್ರಶ್ನೆ ಇದೆ. ರಕ್ಷಣೆ ಕೊಡುವುದರಲ್ಲಿ ಸರ್ಕಾರ ಸೋತಿದೆ. ಜನರಿಗೆ ಕಾನೂನಿನ ಮೇಲೆ ಭಯ ಹೋಗಿದೆ. ಉತ್ತರ ಪ್ರದೇಶ ವಾತಾವರಣ ಬೇರೆ ಇದೆ. ಇಲ್ಲಿನ ವಾತಾವರಣ ಬೇರೆ ಇದೆ ಅಂತಾ ಸಿಎಂ ಯಾವಾಗಲೂ ಹೇಳುತ್ತಾರೆ. ಉತ್ತರ ಪ್ರದೇಶದ ವಾತಾವರಣ ಸೃಷ್ಟಿಯಾಗಿದೆ ಈಗಲಾದರೂ ಅದನ್ನು ಬಳಸುತ್ತಾರಾ ನೋಡಬೇಕಿದೆ ಎಂದಿದ್ದಾರೆ.