– ಮೋದಿ ಪ್ರಧಾನಿಯಾದ್ಮೇಲೆ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಘಟನೆಗಳು ನಡೆದಿರಲಿಲ್ಲ
– ಭಯೋತ್ಪಾದಕರಿಗೆ ಸಹಾಯ ಮಾಡಲು ಕರ್ನಾಟಕ ಸರ್ಕಾರ ಇದೆ ಎಂದ ಸೂಲಿಬೆಲೆ
ಯಾದಗಿರಿ: ಪಾಕಿಸ್ತಾನದ (Pakistan) ಭಯೋತ್ಪಾದಕರು ಇಲ್ಲಿ ಬಂದು ಮಾಡೋದು ಏನೂ ಇಲ್ಲ. ಇಲ್ಲೇ ಭಯೋತ್ಪಾದಕರನ್ನ ಸೃಷ್ಟಿ ಮಾಡಿದ್ದಾರೆ. ಅವರಿಗೆ ಸಪೋರ್ಟ್ ಮಾಡಲು ಕರ್ನಾಟಕ ಸರ್ಕಾರ ಇದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಯಾದಗಿರಿ (Yadagiri) ಜಿಲ್ಲೆಯ ಶಹಾಪುರದ ಕಾರ್ಯಕ್ರಮವೊಂದರಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್; ಆರೋಪಿಯನ್ನು ಯಾವ ಕಾರಣಕ್ಕೂ ಬಿಡೋದಿಲ್ಲ: ಜಿ.ಪರಮೇಶ್ವರ್
Advertisement
Advertisement
ಬೆಂಗಳೂರಿನಲ್ಲಿ ಬಹಳ ವರ್ಷಗಳ ನಂತರ ಬಾಂಬ್ ಬ್ಲಾಸ್ಟ್ ಆಗಿದ್ದನ್ನು ಕೇಳಿದ್ದೇವೆ. ಮೋದಿ ಅವರು ಪಿಎಂ ಆದ ನಂತರ ದೇಶದಲ್ಲಿ ಬಾಂಬ್ ಬ್ಲಾಸ್ಟ್ ಘಟನೆಗಳು ನಡೆದಿಲ್ಲ. ಬಹಳ ವರ್ಷಗಳ ನಂತರ ಈಗ ಬೆಂಗಳೂರಿನಲ್ಲಿ ನಡೆದಿದೆ. ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಮಾಡೋದು ಏನೂ ಇಲ್ಲ. ಇಲ್ಲಿಯೇ ಭಯೋತ್ಪಾದರನ್ನು ಸೃಷ್ಟಿ ಮಾಡಿಬಿಟ್ಟಿದ್ದಾರೆ. ಅವರಿಗೆ ಸಪೋರ್ಟ್ ಮಾಡಲು ಕರ್ನಾಟಕ ಸರ್ಕಾರ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬ್ಲಾಸ್ಟ್ ಪ್ರಕರಣ- ನಾಲ್ವರ ವಶಕ್ಕೆ ಪಡೆದು ವಿಚಾರಣೆ
Advertisement
Advertisement
ಮೋದಿ ಅವರು ಪಾಕಿಸ್ತಾನದ ಭಯೋತ್ಪಾದಕರನ್ನು ಭಾರತದ ಗಡಿಯೊಳಗೆ ಬಿಡ್ತಿಲ್ಲ. ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ಅಲ್ಲಿಯೇ ಮುಗಿಸಿ ಬಿಡ್ತಾರೆ. ಆದ್ರೆ ಈಗ ಪಾಕಿಸ್ತಾನದ ಭಯೋತ್ಪಾದಕರು ಭಾರತಕ್ಕೆ ಬಂದು ಮಾಡೋದಕ್ಕೆ ಏನೂ ಇಲ್ಲ. ಅದಕ್ಕೆ ಇಲ್ಲಿಯೇ ಕೆಲವು ಭಯೋತ್ಪಾದರನ್ನು ಸೃಷ್ಟಿ ಮಾಡಿಬಿಟ್ಟಿದ್ದಾರೆ. ಅವರಿಗೆ ಸಪೋರ್ಟ್ ಮಾಡಲು ಕರ್ನಾಟಕ ಸರ್ಕಾರವಿದೆ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ. ಸಂವಿಧಾನ ರಕ್ಷಣೆ ಮಾಡುವ ಕೇಂದ್ರದಲ್ಲಿ ಘೋಷಣೆ ಕೂಗಿದ್ದಾರೆ. ಬಿ.ಕೆ ಹರಿಪ್ರಸಾದ್ ಅವ್ರು ಪಾಕಿಸ್ತಾನ ಬಿಜೆಪಿಗೆ ಶತ್ರು ಇರಬಹುದು, ಕಾಂಗ್ರೆಸ್‌ಗೆ ಅಲ್ಲ ಅಂತ ಹೇಳಿದ್ದಾರೆ. ಅವರು ಲೇವಲ್ ಅಂತ ತೋರಿಸಿಬಿಟ್ರು. ಕಾಂಗ್ರೆಸ್ ಏನು ಮಾಡಲು ಹೊರಟಿದೆ ಅಂತ ಇದರಿಂದಲೇ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.