ಹಿಂದಿಯಲ್ಲೂ ಶುರುವಾಯ್ತು ಚಕ್ರವರ್ತಿ ದರ್ಶನ್ ಹವಾ!

Public TV
1 Min Read
chakaravarth

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಎಂದೇ ಕರೆಸಿಕೊಳ್ಳುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಚಿತ್ರಗಳೆಂದೂ ಇಂಥಾ ಬಿರುದಿಗೆ ಮೋಸ ಮಾಡಿಲ್ಲ. ಇದೀಗ ದರ್ಶನ್ ಅವರ ಹವಾ ಹಿಂದಿಗೂ ಹರಡಿಕೊಂಡಿದೆ. ಕಳೆದ ವರ್ಷ ದರ್ಶನ್ ಅವರು ನಟಿಸಿದ್ದ ಚಕ್ರವರ್ತಿ ಚಿತ್ರ ಹಿಂದಿಗೆ ಡಬ್ ಆಗಿ ಅಲ್ಲಿನ ಪ್ರೇಕ್ಷಕರನ್ನೂ ಸೆಳೆದುಕೊಂಡಿದೆ.

ಚಕ್ರವರ್ತಿ ಚಿತ್ರದ ಹಿಂದಿ ಡಬ್ಬಿಂಗ್ ವರ್ಷನ್ ಇದೇ ತಿಂಗಳ ಮೂರನೇ ತಾರೀಕಿನಂದು ಯೂಟ್ಯೂಬಿನಲ್ಲಿ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಿಂದಲೇ ಯಾವ ಥರದಲ್ಲಿ ಕ್ರೇಜ್ ಸೃಷ್ಟಿಯಾಗಿತ್ತೆಂದರೆ ಎರಡು ದಿನ ಕಳೆಯೋದರೊಳಗೆ ಏಳು ಮಿಲಿಯನ್‍ಗೂ ಅಧಿಕ ಜನ ಅದನ್ನು ವೀಕ್ಷಿಸಿದ್ದಾರೆ. ಒಟ್ಟಾರೆ ಚಿತ್ರದ ಬಗ್ಗೆ, ದರ್ಶನ್ ಅವರ ಅಭಿನಯದ ಬಗ್ಗೆ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.

Chakravarthy Box Office Collection

ಈ ಕ್ಷಣಕ್ಕೂ ಚಕ್ರವರ್ತಿ ಹಿಂದಿ ವರ್ಷನ್ನಿನ ಅಬ್ಬರ ಏರುಗತಿ ಕಾಣುತ್ತಲೇ ಇದೆ. ಈ ಮೂಲಕವೇ ದರ್ಶನ್ ಅವರಿಗೆ ಬಾಲಿವುಡ್ ಮಟ್ಟದಲ್ಲಿಯೂ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಚಕ್ರವರ್ತಿ ಚಿತ್ರ ಬಿಡುಗಡೆಗೂ ಮುನ್ನವೇ ಬಾಲಿವುಡ್ ಚಿತ್ರಗಳನ್ನೇ ಮೀರಿಸುವಂಥಾ ಕ್ರೇಜ್ ಹುಟ್ಟು ಹಾಕಿತ್ತು. ಬಹು ನಿರೀಕ್ಷಿತ ಭಾರತೀಯ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆ ಚಿತ್ರವೀಗ ಹಿಂದಿಗೆ ಡಬ್ ಆಗಿ ಅಲ್ಲಿಯೂ ಜನಮನ ಸೆಳೆದುಕೊಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
2 Comments

Leave a Reply

Your email address will not be published. Required fields are marked *