ಬೆಂಗಳೂರು: ಸಾಮಾಜಿಕ ಕಾರ್ಯಕರ್ತ, ಗೆಳೆಯ ಪ್ರಶಾಂತ್ ಸಂಬರ್ಗಿ ವಿರುದ್ಧ ಚಕ್ರವರ್ತಿ ಚಂದ್ರಚೂಡ್ ರೊಚ್ಚಿಗೆದ್ದಿದ್ದಾರೆ. ಸಂಬರ್ಗಿಯವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಅಂತ ಹೇಳಿಕೊಳ್ಳಲು ಪ್ರೂಫ್ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಚಂದ್ರಚೂಡ್, ಐತಿಹಾಸಿಕ ಪುರುಷರು, ಸಾಧಕರು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ದೊಡ್ಡ ಹೆಸರು ತಂದುಕೊಟ್ಟವರು ಹಾಗೂ ಮಾಡೆಲ್ ಗಳ ಹೆಸರುಗಳನ್ನು ಹೇಳಿಕೊಂಡು, ಅವರ ಮೊಮ್ಮಗ ಅಂತ ಹೇಳಿಕೊಂಡು ಇವರು ಮಾಡುತ್ತಿರುವ ಕುತಂತ್ರ ಏನು ಎಂದು ಪ್ರಶ್ನಿಸುವ ಮೂಲಕ ಸಂಬರ್ಗಿ ವಿರುದ್ಧ ಗುಡುಗಿದ್ದಾರೆ.
Advertisement
Advertisement
ಬಿಗ್ ಬಾಸ್ ಮನೆಯಲ್ಲಿರುವ ಸಂದರ್ಭದಲ್ಲಿ ಅವರು ಕಿತ್ತೂರು ರಾಣಿ ಚೆನ್ನಮ್ಮನ ಮೊಮ್ಮಗ ಎಮದು ಹೇಳಿದಾಗ ಮೊದಲು ನಾನು ವಿರೋಧಿಸಿದೆ. ನಂತರ ಅದೊಂದು ಶೋ ಎಂದು ಸುಮ್ಮನಾದೆ. ಆದರೆ ಹೊರಗಡೆ ಬಂದ ಬಳಿಕ ಐತಿಹಾಸಿಕ ಪುರುಷರ, ಸಾಧಕರ ಹೆಸರನ್ನು ಹೇಳಬಾರದು. ಐತಿಹಾಸಿಕವಾಗಿ ರಾಣಿ ಚೆನ್ನಮ್ಮಗೆ ಮೊಮ್ಮಗ ಇರಲು ಸಾಧ್ಯವಿಲ್ಲ. ಇದನ್ನು ಕೇಳಿದ್ರೆ ಜನ ನಕ್ಕು ಬಿಡ್ತಾರೆ. ಈ ವಿಚಾರ ದುರುಪಯೋಗವಾಗುತ್ತೆ. ಈ ರೀತಿ ದುರ್ಬಳಕೆ ಮಾಡಿಕೊಳ್ಳಬೇಡ ಎಂದು ಅವರಿಗೆ ನಾನು ಬುದ್ಧಿವಾದ ಹೇಳಿದ್ದೆ ಎಂದರು. ಇದನ್ನೂ ಓದಿ: ಬಿಜೆಪಿಯ ಬೂಟಿನ ರುಚಿಗಾಗಿ ಹಪಹಪಿಸುವ ಪ್ರಶಾಂತ್ ಸಂಬರ್ಗಿ ಕನ್ನಡ ವಿರೋಧಿ: ಚಂದ್ರಚೂಡ್
Advertisement
Advertisement
ಈ ಹಿಂದೆ ನಾನು ಭೂತಾಯಿಯನ್ನು ಮಾರುವುದಾಗಿ ಸಂಬರ್ಗಿ ಹೇಳಿಕೆ ನೀಡಿದ್ದರು. ಇವರು ಒಬ್ಬ ನೆಲೆಹಿಡುಕ, ದಲ್ಲಾಳಿ. ಕಳೆದ ಮೂರು ದಿನಗಳ ಹಿಂದೆ ನಿರೂಪಕಿ ಅನುಶ್ರೀ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಂಗಳೂರಲ್ಲಿ 12 ಕೋಟಿ ಹಾಗೂ ಬೆಂಗಳೂರಿನಲ್ಲಿ 4 ಕೋಟಿ ರೂ. ನ ಮನೆ ಕಟ್ಟಿದ್ದಾರೆ, ಐಷಾರಾಮಿ ಕಾರಿದೆ. ಇದು ಡ್ರಗ್ಸ್ ನಿಂದ ಬಂತು ಎಂದು ಹೇಳಿಕೆ ನೀಡಿದ್ದರು. ಆದರೆ ಇವುಗಳಿಗೆ ದಾಖಲೆಗಳನ್ನು ನೀಡಬೇಕಲ್ವ ಎಂದು ಮರು ಪ್ರಶ್ನೆಗೈದ್ರು.
ಶುಗರ್ ಡ್ಯಾಡಿ ಎಂಬುದು ದೇವರಾಜ ಅರಸು, ಗುಂಡೂರಾವ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ನಮಗೆ ಗೊತ್ತಿರುವ ಪದ. ಇದಕ್ಕೆ ಸಂಬಂಧಪಟ್ಟ ಏನಾದರೂ ದಾಖಲೆಗಳು ಸಂಬರ್ಗಿ ಬಳಿ ಇದೆಯಾ ಎಂದು ಕೇಳಿದರು. ಒಬ್ಬರು ಮಾಜಿ ಮುಖ್ಯಮಂತ್ರಿಯವರು ಇನ್ನೊಬ್ಬ ನಟಿಗೆ ಶುಗರ್ ಡ್ಯಾಡಿ ಆಗಿದ್ದಾರೆ. ಲಕ್ಷಾಂತರ ರೂ. ಹಣ ಕೊಡ್ತಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡ್ತಾರೆ. ಅದಕ್ಕೆ ಸಂಬಂಧಪಟ್ಟ ದಾಖಲಾತಿಗಳನ್ನು ಡಿಸೆಂಬರ್ ನಲ್ಲಿ ಕೊಡುತ್ತೇನೆ ಅಂತ ನಾನು ಹೇಳಿಕೆ ನೀಡಿದರೆ ನೀವು ಪ್ರಚಾರ ಮಾಡ್ತೀರಾ..?, ಅದೇ ರೀತಿ ದಾಖಲೆಗಳೇ ಇಲ್ಲದೆ ಅನುಶ್ರೀ ಬಗ್ಗೆ ಸಂಬರ್ಗಿ ಹೇಗೆ ಆರೋಪ ಮಾಡಿದ್ರು ಎಂದು ಚಂದ್ರಚೂಡ್ ಪ್ರಶ್ನೆಗಳ ಸುರಿಮಳೆಗೈದ್ರು.
ಸುಖಾಸುಮ್ಮನೆ ಮಾತನಾಡುತ್ತಿರುವ ಸಂಬರ್ಗಿಯವರು ಒಂದು ಶೀಟ್ ಆದರೂ ದಾಖಲೆ ಕೊಡಲಿ. ಸುಮ್ಮನೆ ಪ್ರಚಾರ ತೆಗೆದುಕೊಂಡು ಬಿಜೆಪಿ ಪಕ್ಷ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ. ಕುತಂತ್ರಗಾರಿಕೆ ಮಾಡುತ್ತಿದ್ದಾರೆ. ದಾಖಲೆಗಳನ್ನು ಬಿಡುಗಡೆ ಮಾಡಲು ಯಾಕೆ ಇಷ್ಟೊಂದು ಸಮಯ ಬೇಕು..?, ಶೃತಿ ಹರಿಹರನ್ ಅವರ ಮೀಟೂ ವಿಚಾರಕ್ಕೆ ಮೂರು ವರ್ಷವೇ ಆಗೋಯ್ತು. ಇದೀಗ ಕರ್ನಾಟಕದಲ್ಲಿ ಡ್ರಗ್ಸ್ ವಿಚಾರ ಬಂದು ಸುಮಾರು ಎರಡೂವರೆ ವರ್ಷ ಆಗೋಯ್ತು. ಎಲ್ಲಿದೆ ದಾಖಲೆಗಳು..?. ಈ ಪ್ರಕರಣಗಳು ನಾಳೆ ಯಾವ ರೀತಿಯ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತೆ ಗೊತ್ತಿಲ್ಲ. ಆದರೆ ಸಮಾಜಕ್ಕೆ, ಯುವಕರಿಗೆ ಒಳ್ಳೆಯದಾಗಬೇಕು. ಆದರೆ ಈ ರೀತಿ ಆರೋಪಗಳನ್ನು ಮಾಡಿಕೊಂಡು ಕಾಲಹರಣ ಮಾಡಿ ಪ್ರಚಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಸಂಬರ್ಗಿ ವಿರುದ್ಧ ಕಿಡಿಕಾರುವ ಮೂಲಕ ದಾಖಲೆಗಳನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಚೂಡ್ ಆಗ್ರಹಿಸಿದರು.