ಬೆಂಗಳೂರು: ಸಿಸಿಬಿ (CCB Police) ವಿಚಾರಣೆಯ ವೇಳೆ ಕುಸಿದು ಬಿದ್ದ ವಂಚಕಿ ಚೈತ್ರಾ ಕುಂದಾಪುರ ಅವರಿಗೆ (Chaitra Kundapura) ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಡಿಸ್ಚಾರ್ಜ್ ಇಲ್ಲ ಎಂದು ವಿಕ್ಟೋರಿಯಾ ಟ್ರಾಮಾ ಕೇರ್ ಸೆಂಟರ್ ನಾ ಸ್ಪೆಷಲ್ ಆಫೀಸರ್ ಬಾಲಾಜಿ ಪೈ ಹೇಳಿದ್ದಾರೆ.
ಚೈತ್ರಾ ಆರೋಗ್ಯದ ಬಗ್ಗೆ ಪ್ರತಿಕ್ರಿಯಿಸಿ, ಚೈತ್ರಾ ಅವರು ಬರುವಾಗ ಪ್ರಜ್ಞಾಹೀನರಾಗಿ ಇದ್ರು. ಚಿಕಿತ್ಸೆ ಕೊಟ್ಟಿದ್ದೀವಿ, ಸಿಟಿ ಸ್ಕ್ಯಾನ್ ಮಾಡಿದ್ದೀವಿ. ಕಾನ್ಸಿಯಸ್ ಸ್ವಲ್ಪ ಬರ್ತಿದೆ ಈಗ ಪಿಟ್ಸ್ ಬಂದಿದ್ದೀಯಾ ಇಲ್ವಾ ಗೊತ್ತಿಲ್ಲ. ಮುಂಚೆ ಇದು ಇತ್ತು ಅಂತ ಅವರ ಸ್ನೇಹಿತರು ಹೇಳ್ತಿದ್ದಾರೆ ಎಂದರು.
ಕಾನ್ಸಿಯಸ್ ಬರ್ತಿದೆ, ICU ನಲ್ಲಿ ಇಟ್ಟಿದ್ದಾರೆ. ಸಿಸಿಬಿ ಅಧಿಕಾರಿಗಳು ಜೊತೆಗೆ ಇದ್ದಾರೆ. ಅವರ ಆರೋಗ್ಯದಲ್ಲಿ ಇಂಪ್ರೂವ್ ಮೆಂಟ್ ಇದೆ ಕಾನ್ಸಿಯಸ್ ಬಂದು ಆರಾಮಾದ ತಕ್ಷಣ ವಾರ್ಡ್ ಗೆ ಶಿಫ್ಟ್ ಮಾಡ್ತೀವಿ. ವಾಮಿಟ್ ಕಂಟೆಂಟ್, ಬ್ಲಡ್ ರಿಪೋರ್ಟ್ ಬಂದಿಲ್ಲ. ನಾಳೆ ಒಳಗಡೆ ಬರಬಹುದು. ಡಿಸ್ಚಾರ್ಜ್ ಇನ್ನೂ ಸದ್ಯಕ್ಕೆ ಇಲ್ಲ. ಅವರು ಪ್ರಜ್ಞೆಗೆ ಬಂದು ಹುಷಾರಾದ್ರೆ ವಾರ್ಡ್ ಗೆ ಶಿಫ್ಟ್ ಮಾಡಿ ಡಿಸ್ಚಾರ್ಜ್ ಮಾಡುತ್ತೇವೆ. ಅವರ ಕುಟುಂಬದವರನ್ನ ಕರೆಸುತ್ತಾ ಇದ್ದೇವೆ ಎಂದರು.
ಉದ್ಯಮಿಗೆ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರಳನ್ನು ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದಾರೆ. 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ. ಇದನ್ನೂ ಓದಿ: ನನ್ನ ಮುಖ ನೋಡಿ ಯಾರ್ ದುಡ್ಡು ಕೊಡ್ತಾರೆ ಮೇಡಂ: ಚೈತ್ರಾ ಹೇಳಿದ್ದೇನು?
ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚೈತ್ರಾ ಬಾಯಿಯಲ್ಲಿ ನೊರೆ ಬಂದ ದೃಶ್ಯ ಸೆರೆಯಾಗಿದ್ದು, ಭಾರೀ ಅನುಮಾನ ಹುಟ್ಟಿಸಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]