– ಆಪ್ತನ ಮನೆಯಲ್ಲಿ ಕಾರು ಇಟ್ಟು ಶ್ರೀ ಎಸ್ಕೇಪ್
ಬೆಂಗಳೂರು/ಮೈಸೂರು: ಚೈತ್ರಾ ಕುಂದಾಪುರ (Chaitra Kundapura) ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅಭಿನವ ಹಾಲಶ್ರೀ (Abhinava Halashree) ಕಾರು ಚಾಲಕನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅಭಿನವ ಹಾಲಶ್ರೀಗಾಗಿ ಸಿಸಿಬಿ ಪೊಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಕಾರು ಚಾಲಕನ ವಿಚಾರಣೆಗೊಳಪಡಿಸುವ ಮೂಲಕ ಸ್ವಾಮೀಜಿ ಪತ್ತೆಗೆ ಪ್ರಯತ್ನ ಮಾಡಲಾಗತ್ತಿದೆ. ಸ್ವಾಮೀಜಿ ಬಳಕೆ ಮಾಡುತ್ತಿದ್ದ ಇನ್ನೋವಾ ಕಾರು (Innova Car) ಹಾಗೂ ಚಾಲಕ ನಿಂಗರಾಜುನನ್ನು ಸಿಸಿಬಿ ಪೊಲೀಸರು ಮೈಸೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಸ್ವಾಮೀಜಿಯನ್ನ ಕೊನೆಯದಾಗಿ ಎಲ್ಲಿ ಡ್ರಾಪ್ ಮಾಡಲಾಯಿತು. ಬೇರೆ ಯಾವ ಕಾರಿನಲ್ಲಿ ಹೋದ್ರು. ಎಲ್ಲಿಗೆ ಹೋದ್ರು, ಎಲ್ಲಿ ಆಶ್ರಯ ಪಡೆದಿದ್ದಾರೆ ಅಂತಾ ಮಾಹಿತಿ ಕಲೆ ಹಾಕಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣದ ಶ್ರೀಕಾಂತ್ ಮನೆ ಜಾಲಾಡಿದ ಸಿಸಿಬಿ- ಬಾಕ್ಸ್‌ನಲ್ಲಿಟ್ಟಿದ್ದ 41 ಲಕ್ಷ ಪತ್ತೆ
ಸ್ವಾಮೀಜಿ ಎಸ್ಕೇಪ್ ಆಗುವ ವೇಳೆ ನಾಲ್ಕು ಸಿಮ್ ಕಾರ್ಡ್ ಹಾಗೂ ನಾಲ್ಕು ಬೇಸಿಕ್ ಮೊಬೈಲ್ ಖರೀದಿಸಿ ಮೈಸೂರಿನಿಂದ ಎಸ್ಕೇಪ್ ಆಗಿದ್ದಾರೆ. ಮೈಸೂರಿನಲ್ಲಿ ತಮ್ಮ ಕಾರನ್ನ ನಿಲ್ಲಿಸಿ ನಾಪತ್ತೆಯಾಗಿದ್ದಾರೆ. ಎಸ್ಕೇಪ್ ಆಗುವ ವೇಳೆ ಕಾರಿನ ನಂಬರ್ ಪ್ಲೇಟ್ ತೆಗೆದಿದ್ದಾರೆ. ನಂಬರ್ ಪ್ಲೇಟ್ ತೆಗೆದು ಕಾರನ್ನು ಆಪ್ತನ ಮನೆಯಲ್ಲಿ ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
Web Stories