– ನನಗೆ ಮೇಕಪ್ ಮಾಡಲು 3 ದಿನ ತಗೊಂಡ್ರು
ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದ 5ನೇ ಆರೋಪಿಯಾಗಿರುವ ಹಾಗೂ ಡೀಲ್‍ನಲ್ಲಿ ‘ವಿಶ್ವನಾಥ್ ಜೀ’ ಪಾತ್ರಧಾರಿಯಾಗಿದ್ದ ಚನ್ನನಾಯ್ಕ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನನಗೆ ಗಗನ್ ಮತ್ತು ಧನಂಜಯ್ ಅವರು ಚೈತ್ರಾ ಅವರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಆಗ ನಾನು ಅವರ ಮೂಲಕ ಒತ್ತಡ ಹೇರುತ್ತೇನೆ. ಟಿಕೆಟ್ ಕೊಡಿಸುವಂತಹ ವ್ಯಕ್ತಿ ನನ್ನ ಮುಂದೆ ಬಂದು ಕುಳಿತುಕೊಂಡು ವಿಚಾರವನ್ನು ಹೇಳಲಿ. ಆಗ ನನಗೆ ಅದು ಹೌದು ಅನಿಸಿದ್ರೆ ನಾನು ಮುಂದೆ ಬರಲು ಇಚ್ಛೆ ಪಡುತ್ತೇನೆಯೋ ಇಲ್ಲವೋ ಎಂಬುದನ್ನು ಆ ಬಳಿಕ ಹೇಳುತ್ತೇನೆ. ನಂತರ ಬರಲೇ ಬೇಕು ಎಂದು ಅವರು ಒತ್ತಾಯದ ಮೇಲೆ ಕರಿದಿದ್ದಕ್ಕೆ ಚೈತ್ರಾ ಅವರನ್ನು ಕಡೂರಿಗೆ ಕರೆಸಿ ಗಗನ್ ಅವರ ಮನೆಯಲ್ಲಿಯೇ ಸತತ ಮೂರು ಗಂಟೆ ಮೀಟಿಂಗ್ ಮಾಡಿದ್ದೇವೆ ಎಂದು ಹೇಳಿದರು.
ಅವರು ನನ್ನನ್ನು ‘ವಿಶ್ವನಾಥ್ ಜೀ’ ಯಂತೆ ಪ್ರಿಪೇರ್ ಮಾಡೋಕೆ ಮೂರು ದಿನ ತೆಗೆದುಕೊಂಡಿದ್ದಾರೆ. ಯಾಕಂದರೆ ಮೇಕಪ್ ಮಾಡಬೇಕು, ಮೀಸೆ ತೆಗೀಬೇಕು ಅನ್ನೋದನ್ನು ನನ್ನ ಜೊತೆ ಹೇಳಿಕೊಳ್ಳಲು ಆಗುತ್ತಿರಲಿಲ್ಲ. ನೀವು ಹೋಗಿ ಇಷ್ಟು ಮಾತಾಡಬೇಕು ಎಂದು ಹೇಳಿದ್ರು ಅಷ್ಟೇ. ಅದಕ್ಕೆ ನಾನು ಒಪ್ಪಿಕೊಂಡೆ. ಹೀಗೆ ಒಪ್ಪಿಕೊಂಡು ಹೊರಟಿರುವ ಸಮಯದಲ್ಲಿ ಚೈತ್ರಾ ಅವರು ನಿಮಗೆ ನೋಡೋಕೆ ಒಂದು ಫೋಟೋ ಕಳುಹಿಸಿದ್ದಾರೆ. ಈ ಫೋಟೋದಂತೆ ನೀವು ರೆಡಿ ಆಗಬೇಕು ಎಂದು ಹೇಳಿ ಫೋಟೋ ತೋರಿಸುತ್ತಾರೆ. ಬಳಿಕ ಅವರ ಫ್ರೆಂಡ್ ಕಟ್ಟಿಂಗ್ ಶಾಪ್‍ಗೆ ಕರೆದುಕೊಂಡು ಹೋಗಿ ನನ್ನನ್ನು ರೆಡಿ ಮಾಡಿ ನಂತರ ಬೆಂಗಳೂರಿನ ಕುಮಾರಕೃಪಾಗೆ ಕರೆದುಕೊಂಡು ಬರುತ್ತಾರೆ ಎಂದು ಹೇಳಿದರು.
ಮುಂದಿನ ಬಾರಿ ಶೋಭಾ ಕರಂದ್ಲಾಜೆಯವರಿಗೆ ಎಂಪಿ ಟಿಕೆಟ್ ಕೊಡಲ್ಲ. ನನಗೆ (ಚೈತ್ರಾ) ಟಿಕೆಟ್ ಕೊಡುತ್ತಾರೆ. ಆಗ ಇವರನ್ನು ನಾನು ಶಾಸಕರನಾಗಿ ಗೆಲ್ಲಿಸಿಕೊಂಡರೆ ಎಂಪಿಯಾಗಿ ನಾನು ಗೆಲ್ಲೋಕೆ ಸುಲಭವಾಗುತ್ತದೆ ಎಂದು ಹೇಳಿದರು. ಆಗ ನಾನು ಆರ್ಥಿಕವಾಗಿ ಚೆನ್ನಾಗಿರುವಂತಹ ವ್ಯಕ್ತಿ ಅಲ್ಲ. ಹೀಗಾಗಿ ನಿಮ್ಮ ಜೊತೆ ಸಮಯ ಕಳೆಯಲು ನನ್ನಿಂದ ಸಾಧ್ಯವಿಲ್ಲ. ನನಗೆ ತುಂಬಾ ಕಮಿಟ್ಮೆಂಟ್ ಇದೆ, ಒಂದು ಲಕ್ಷ ರೂ.ಗೆ ನಾನು ಬಡ್ಡಿ ಕಟ್ಟುತ್ತಿದ್ದೇನೆ ಅಂದೆ. ಆಗ ಅವರು ನಾವು ನಿಮಗೆ ನಮ್ಮ ಕೈಯಿಂದ 1 ಲಕ್ಷ ರೂ. ಕೊಡುತ್ತೇವೆ. ಯಾಕೆಂದರೆ ಮುಂದೆ ನಾನು ಎಂಪಿ ಆಗಬೇಕು, ನಿಮ್ಮಂತವರು ನಮಗೆ ಬೇಕು. ಕಳೆದ ಬಾರಿ ಎಂಎಲ್‍ಎ ಎಲೆಕ್ಷನ್ ನಿಂತುಕೊಂಡು ಕೈಯಲ್ಲಿರುವ ಹಣವನ್ನೆಲ್ಲಾ ಹಾಳು ಮಾಡಿಕೊಂಡಿದ್ದೀರಾ. ಈ ಹಿನ್ನೆಲೆಯಲ್ಲಿ ರಾಜಕೀಯವಾಗಿ ನಿಮ್ಮನ್ನು ಬೆಳೆಸುವ ಜವಾಬ್ದಾರಿ ನಂದು. ನಾನು ಹೇಳಿದರೆ ದೊಡ್ಡ ದೊಡ್ಡವರೇ ನನ್ನ ಮಾತು ಕೇಳುತ್ತಾರೆ ಅಂತ ಹೇಳಿ ನಮಗೂ ಆಮೀಷ ಒಡ್ಡಿದ್ದಾರೆ ಎಂದು ಚೈತ್ರಾ ಕುಂದಾಪುರ ವಿರುದ್ಧ ಚನ್ನನಾಯ್ಕ್ ಆರೋಪಿಸಿದರು. ಇದನ್ನೂ ಓದಿ: MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್
ಇತ್ತ ಗಗನ್ ಅವರು 1 ಲಕ್ಷ ಕೋಡ್ತೀನಿ ಅಂತಾ ಒಪ್ಪಿಕೊಂಡು, ಒಂದು ಲಕ್ಷ ಹಾಕಿದ್ದೀನಿ ಅಂತಾನೂ ಹೇಳಿ ಕಡೂರಿನಿಂದ ಕುಮಾರಕೃಪಾಗೆ ಬಾಡಿಗೆ ಬಾಡಿಗೆ ಮಾಡಿಕೊಂಡು ಬಂದೆವು. ಆ ಬಾಡಿಗೆ ಹಣ 7 ಸಾವಿರವನ್ನು ಮುರಿದುಕೊಂಡು ನನ್ನ ಅಕೌಂಟಿಗೆ 93 ಸಾವಿರವನ್ನು ಟ್ರಾನ್ಸ್‍ಫರ್ ಮಾಡಿದ್ದಾರೆ. ಗಗನ್, ಚೈತ್ರಾ ಕುಂದಾಪುರ, ಧನಂಜಯ್ ಹಾಗೂ ದೂರು ನೀಡಿರುವ ಗೋವಿಂದ ಪೂಜಾರಿ ಅವರ ಜೊತೆನೂ ನನ್ನ ನಂಬರ್ ಇದೆ. ಆದರೆ ಇವರು ಯಾರು ಕೂಡ ನನ್ನ ನಂಬರ್ ಅನ್ನು ಸಿಸಿಬಿ ಪೊಲೀಸರಿಗೆ ನೀಡಿಲ್ಲ ಅನ್ನೋದೇ ಕುತೂಹಲ ಎಂದರು.
ಸ್ವಾಮೀಜಿ, ಚೈತ್ರಾ ಹಾಗೂ ಗಗನ್ ಇವರಿಗೆ ಮೂವರಿಗೆ ಬಿಟ್ಟರೆ ಬೇರೆ ಯಾರಿಗೂ ದೊಡ್ಡ ಮಟ್ಟಿನ ಹಣಕಾಸು ವ್ಯವಹಾರ ಗೊತ್ತಿಲ್ಲ ಅನಿಸುತ್ತೆ. ನಮಗೆ ಯಾವಾಗ ಅನುಮಾನ ಬಂದು ಇವರನ್ನು ಕೇಳುವುದಕ್ಕೆ ಶುರು ಮಾಡ್ತೀವೋ ಆಗ ಇದ್ದಕ್ಕಿದ್ದ ಹಾಗೆಯೇ ಗಗನ್ ಅವರು ಕಾರು ತೆಗೆದುಕೊಂಡು ಬರುತ್ತಾರೆ, ಅದ್ಧೂರಿಯಾಗಿ ಮದುವೆ ಆಗ್ತಾರೆ. ಇವರೆಲ್ಲಾ ಆರ್ಥಿಕವಾಗಿ ಹೇಗಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಇದನ್ನು ಪ್ರಶ್ನೆ ಮಾಡಿದಾಗ ನಮ್ಮ ಮೇಲೆ ಧಮ್ಕಿ ಹಾಕುತ್ತಾರೆ. ಇಷ್ಟೆಲ್ಲಾ ಆದ ಬಳಿಕ ನನಗೆ ಅನುಮಾನ ಇನ್ನಷ್ಟು ಹೆಚ್ಚಾಯಿತು. ಆಗ ನಾನು ಗೋವಿಂದ ಪೂಜಾರಿಗೆ ಫೋನ್ ಮಾಡಿದೆ. ಆದರೆ ಅವರು ಪೋನ್ ರಿಸೀವ್ ಮಾಡಿಲ್ಲ. ಮಾಡಿದರೂ ನನ್ನ ಮಾತು ಕೇಳಲು ರೆಡಿ ಇರಲಿಲ್ಲ ಎಂದರು.
ಗೋವಿಂದ ಪೂಜಾರಿ ಪರಿಚಯ ಹೇಗೆ?: ನಾನು ಕುಮಾರಕೃಪಾಗೆ ಹೋದಾಗ. ಅಲ್ಲಿ ಒಂದು ರೂಮಿನಲ್ಲಿ ಗೋವಿಂದ ಪೂಜಾರಿ ನನ್ನನ್ನು ಭೇಟಿಯಾಗುತ್ತಾರೆ. ಈ ವೇಳೆ ಅವರು ನನಗೆ ಬೊಕ್ಕೆ ಹಾಗೂ ಡ್ರೈಫೂಟ್ಸ್, ಸ್ವೀಟ್ ಬಾಕ್ಸ್ ಕೊಡುತ್ತಾgಕ್ಸೀ ಸ್ವೀಟ್ ಬಾಕ್ಸ್‍ನಲ್ಲಿ ಅವರ ವಿಸಿಟಿಂಗ್ ಕಾರ್ಡ್ ಇಟ್ಟಿರುತ್ತಾರೆ. ಆ ವಿಸಿಟಿಂಗ್ ಕಾರ್ಡ್ ಅನ್ನು ಧನಂಜಯ್ ಹಾಗೂ ಗಗನ್‍ಗೆ ಗೊತ್ತಾಗಂದತೆ ಎತ್ತಿಟ್ಟುಕೊಂಡಿದ್ದೆ. ಆ ನಂಬಿರ್‍ನಿಂದ ಪೂಜಾರಿಗೆ ಕರೆ ಮಾಡಿದೆ. ಆದ್ರೆ ಅವರು ಕಾಲ್ ಎತ್ತಿಲ್ಲ ಎಂದು ತಿಳಿಸಿದರು.
Web Stories