ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ (Chaitra Kundapura) ಹಾಗೂ ಗ್ಯಾಂಗ್ ಡೀಲ್‍ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆಯನ್ನು (Chakravarthy Sulibele) ಥಳಕು ಹಾಕುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಸೂಲಿಬೆಲೆ ಪಬ್ಲಿಕ್ ಟಿವಿಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojary) ಮೂಲಕ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಎರಡು ಬಾರಿ ಕರೆ ಮಾಡಿದ್ರು. ಗೋವಿಂದ ಬಾಬು ಪೂಜಾರಿಯವರ ಜೊತೆ ಯಾಕೆ ಹೀಗೆ ದುಡ್ಡು ಕೊಟ್ರಿ ಅಂತಾ ಜಗಳವಾಡಿದ್ದೆ. ಹಾಲಾಶ್ರೀ ಸ್ವಾಮೀಜಿ ಜೊತೆ ಸೇರಿದಂತೆ ಅನೇಕ ಸ್ವಾಮೀಜಿಗಳ ಜೊತೆ ಸಂಪರ್ಕ ಇದೆ. ಹಾಗಂತ ಈ ಪ್ರಕರಣದಲ್ಲಿ ಥಳಕು ಹಾಕೋದು ಬೇಡ ಎಂದರು.
ನನ್ನ ಹೆಸರನ್ನು ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಆದರೆ ಇದನ್ನು ಗಂಭೀರವಾಗಿ ನಾನು ತೆಗೆದುಕೊಳ್ಳಲ್ಲ. ಗೋವಿಂದ ಬಾಬು ಪೂಜಾರಿ ನನ್ನ ಆತ್ಮೀಯರು ಎಂದರು. ಇದನ್ನೂ ಓದಿ: ಹೈದರಾಬಾದ್‍ನಲ್ಲಿ ಹಾಲಶ್ರೀ ಅಡಗಿರುವ ಶಂಕೆ – ಬಂಧನಕ್ಕೆ ತೆರಳಿದ ಸಿಸಿಬಿ ಟೀಂ
ಸಿಟಿ ರವಿ ಕೂಡ ತುಂಬಾ ಸಲ ಹೇಳಿದ್ರು ಬಿಜೆಪಿಯಲ್ಲಿ ದುಡ್ಡು ಕೊಟ್ಟು ಟಿಕೇಟ್ ಪಡೆಯುವಂತಿಲ್ಲ. ನಾನು ಕೂಡ ಇದನ್ನೇ ಹೇಳಿದ್ದೇನೆ. ಗೋವಿಂದ ಬಾಬು ಪೂಜಾರಿಗೆ ಬೈದಿದ್ದೇನೆ ಎಂದು ತಿಳಿಸಿದರು.
Web Stories