ಬೆಂಗಳೂರು: ವಂಚಕಿ ಚೈತ್ರಾ ಕುಂದಾಪುರ ಡೀಲ್ (Chaita kundapura Deal Case) ಪ್ರಕರಣ ಇದೀಗ ಬಗೆದಷ್ಟು ಬಯಲಾಗುತ್ತಿದೆ. ಡೀಲ್‍ನಲ್ಲಿ ವಿಶ್ವನಾಥ್ ಜೀ ಪಾತ್ರಧಾರಿರಾಗಿದ್ದ 5ನೇ ಆರೋಪಿ ಚನ್ನ ನಾಯ್ಕ್ ಅವರು ತಮ್ಮ ಪಾತ್ರದ ಬಗ್ಗೆ ಪಬ್ಲಿಕ್ ಟಿವಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಾನು ಕಬಾಬ್, ಕೆಆರ್ ಪುರಂ, ನಾಯ್ಕ್ ಅಲ್ಲ. ನಿನ್ನೆಯಿಂದ ಎಲ್ಲಾ ಕಡೆ ಕಬಾಬ್ ನಾಯ್ಕ್ ಅಂತ ಬಳಕೆ ಆಗುತ್ತಿದೆ. ಈ ರೀತಿಯಾಗಿ ಬಳಸಬೇಡಿ ಎಂದು ಮನವಿ ಮಾಡಿಕೊಂಡರು. ಹಾಗೆಯೇ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ. ಸಿಸಿಬಿಯವರು ನನಗೆ ಯಾವ ನೋಟಿಸ್ ಕೂಡ ಕೊಟ್ಟಿಲ್ಲ ಎಂದು ಹೇಳಿದರು.
Advertisement
Advertisement
ಘಟನೆ ಬಗ್ಗೆ ವಿವರಣೆ: ಘಟನೆ ನಡೆದಿರುವುದು ಎಲ್ಲಾ ಕಡೂರಿನಲ್ಲಿ. ನಾವು ಕೂಡ ಕಡೂರಿನಲ್ಲಿಯೇ ವಾಸವಾಗಿದ್ದೇವೆ. ಒಂದು ತಿಂಗಳ ಹಿಂದೆಯಷ್ಟೇ ನಾನು ಬೆಂಗಳೂರಿಗೆ ಶಿಫ್ಟ್ ಆಗಿದ್ದೇನೆ. ನಡೆದಿರುವುದು ಅಷ್ಟೂನೂ ನಿಜ ಘಟನೆಗಳೇ ಆಗಿವೆ ಎಂದು ತಿಳಿಸಿದರು. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
Advertisement
Advertisement
5 ಕೋಟಿಗೂ ನಮಗೂ ಸಂಬಂಧವಿಲ್ಲ. ಈ ವಿಚಾರವಾಗಿ ಗೋವಿಂದ ಪೂಜಾರಿಯವರೂ ಮಾತನಾಡಿಲ್ಲ, ಚೈತ್ರಾ ಅವರು ಕೂಡ ಮಾತಾಡಿಲ್ಲ. ನನ್ನ ಜೊತೆ ಮಾತಾಡಿದ್ದು ಇಷ್ಟೇ ಮುಂದಿನ ಸಂಸದ ನಾನಾಗ್ತೀನಿ ಇದ್ದೀನಿ, ಈ ಬಾರಿ ಶಾಸಕ ಅವರಾಗುತ್ತಿದ್ದಾರೆ. ಹೀಗಾಗಿ ರಾಜಕೀಯವಾಗಿ ನಿಮಗೆ ಏನು ಬೆಂಬಲ ಬೇಕೋ ಅದನ್ನು ನಾವು ಮಾಡುತ್ತೇವೆ. ಆದರೆ ಈಗ ನೀವು ನಮಗೆ ಸಹಕರಿಸಬೇಕು ಎಂದು ಹೇಳಿದ್ರು.
ಆಗ ನಾನು ಏನು ಮಾಡಬೇಕಲು ಎಂದು ಕೇಳಿದೆ. ಅದಕ್ಕೆ ಅವರು ಕುಮಾರಕೃಪಾ ಗೆಸ್ಟ್ ಹೌಸ್‍ಗೆ ಹೋಗಬೇಕು. ಪೂಜಾರಿ ಎಂಬವರು ಬರುತ್ತಾರೆ ಅವರಿಗೆ ನೀವು ಲೆಟರ್ ಪಾಸ್ ಮಾಡಬೇಕು. ಬಳಿಕ ಶೇಕ್‍ಹ್ಯಾಂಡ್ ಕೊಟ್ಟುಬಿಟ್ಟು ಫ್ಲೈಟ್‍ಗೆ ಲೇಟಾಗುತ್ತೆ ಅಂತಾ ಹೇಳಿ ನೀವು ಹೊರಡಬೇಕು ಎಂದು ಹೇಳುತ್ತಾರೆ. ಇದು ಅವರು ನನಗೆ ಹೇಳಿದ ಪಾತ್ರವಾಗಿದೆ ಎಂದು ಚನ್ನನಾಯ್ಕ್ ವಿವರಿಸಿದರು.
Web Stories