ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ವಂಚನೆ ಪುರಾಣ ಬಯಲಾದ ಬೆನ್ನಲ್ಲೇ ಬಿಜೆಪಿಯನ್ನು (BJP) ಟೀಕಿಸಿ ಕಾಂಗ್ರೆಸ್ (Congress) ಟ್ವೀಟ್ ಮಾಡಿದೆ. ಬಿಜೆಪಿಯಲ್ಲಿ ಸಿಎಂ ಹುದ್ದೆ ಮಂತ್ರಿಗಿರಿ ಮಾರಾಟವಾದಂತೆ ಟಿಕೆಟ್‍ಗಳು ಮಾರಾಟವಾಗಿದೆಯಾ ಅಂತಾ ಕೆಣಕಿದೆ.
ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ @BasanagoudaBJP ಅವರು ಬಿಜೆಪಿ ಟಿಕೆಟ್ ಗೆ 7 ಕೋಟಿ ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ.
????ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ,
????PSI ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು,
????ರೌಡಿ ಶೀಟರ್ ಗಳೂ ಬಿಜೆಪಿಗರಿಗೆ ಆಪ್ತರು,
????ಟಿಕೆಟ್ ಹಗರಣದ… pic.twitter.com/e4onp4yrOE
— Karnataka Congress (@INCKarnataka) September 13, 2023
Advertisement
ಉಗ್ರ ಭಾಷಣಕಾರ್ತಿ ಬಿಜೆಪಿಯ ಎಂಎಲ್‍ಎ ಟಿಕೇಟ್ ಕೊಡಿಸೋದಾಗಿ 7 ಕೋಟಿ ಪಡೆದು ವಂಚಿಸಿದ್ದಾರೆ ಅಂತಾ ಕುಂದಾಪುರದ ಉದ್ಯಮಿಯೊಬ್ಬರು ದೂರಿ, ಈ ವಂಚನೆ ಪ್ರಕರಣ ಬೆಳಕಿಗೆ ಬಂದ್ರೂ ಬಿಜೆಪಿ ಪಕ್ಷ ದೂರು ಕೊಡದೇ ಸುಮ್ಮನಿರೋದ್ಯಾಕೆ..? ಈ 7 ಕೋಟಿ ವಂಚನೆಯಲ್ಲಿ ಬಿಜೆಪಿಗರ ಪಾಲೆಷ್ಟು? ಆರ್‍ಎಸ್‍ಎಸ್ ಪಾಲೆಷ್ಟು ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಯಾವುದೋ ಫೋನ್ ಬಂತೆಂದು ಕಾರ್ಯಕ್ರಮ ರದ್ದು ಮಾಡಿದ್ದ ಚೈತ್ರಾ ಕುಂದಾಪುರ!
Advertisement
ಬಿಜೆಪಿ ಅಂದರೆ ವಂಚಕರು, ಅತ್ಯಾಚಾರಿಗಳು, ಭ್ರಷ್ಟರಿಗೆ ಆಶ್ರಯತಾಣ!
ವಂಚನೆ ಪ್ರಕರಣದ ಪ್ರಮುಖ ಆರೋಪಿ ಗಗನ್ ಕಡೂರು ಎಂಬುವವನು ಬಿಜೆಪಿಯ ಯುವ ಮೋರ್ಚಾದ ಕಾರ್ಯದರ್ಶಿ.
ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ವಂಚನೆಗೊಳಪಟ್ಟವರು ಬಿಜೆಪಿಗೆ ದೂರು ನೀಡಿದರೂ ಬಿಜೆಪಿ ಕಣ್ಮುಚ್ಚಿ ಕುಳಿತಿತ್ತು.
ಪಕ್ಷದ ಹೆಸರಲ್ಲಿ ವಂಚನೆ ನಡೆದರೂ ದೂರು ನೀಡಲು… pic.twitter.com/Q3MOuqORni
— Karnataka Congress (@INCKarnataka) September 13, 2023
Advertisement
ಈ ಮಧ್ಯೆ ಬಿಜೆಪಿ ನಾಯಕರೊಂದಿಗೆ ಚೈತ್ರಾ ಕುಂದಾಪುರ ಇರೋ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚೈತ್ರಾ ತಪ್ಪು ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಿ. ಅನಗತ್ಯವಾಗಿ ಹಿಂದುಪರ ಕಾರ್ಯಕರ್ತರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಮಾಜಿ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
Advertisement
Web Stories