ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಶುರುವಾದ ದಿನದಿಂದ ಜಗಳದ ಮೂಲಕವೇ ಹೈಲೆಟ್ ಆಗುತ್ತಿದೆ. ಮನರಂಜನೆಗಿಂತ ಸ್ಪರ್ಧಿಗಳ ಕಿರಿಕ್ ನೋಡಿ ಸ್ವತಃ ವೈಲ್ಡ್ ಕಾರ್ಡ್ ಎಂಟ್ರಿ ಹನುಮಂತ ಕೂಡ ದಂಗಾಗಿದ್ದಾರೆ. ಕ್ಯಾಪ್ಟನ್ ಆಗಿರೋ ತ್ರಿವಿಕ್ರಂ ರೂಲ್ಸ್‌ವೊಂದನ್ನು ಬ್ರೇಕ್ ಮಾಡಿದ್ದಾರೆ. ಈ ವೇಳೆ, ಚೈತ್ರಾಗೆ (Chaithra Kundapura) ಪಾಠ ಮಾಡಲು ಬಂದ ಐಶ್ವರ್ಯಾ ಮೇಲೆ ಕಿಡಿಕಾರಿದ್ದಾರೆ. ನನ್ನ ಮೈ ಮುಟ್ಟಬೇಡಿ, ಕಾಲು ನೆಟ್ಟಗಿದೆ ಎಂದು ಐಶ್ವರ್ಯಾಗೆ ಚೈತ್ರಾ ಆವಾಜ್ ಹಾಕಿದ್ದಾರೆ.
ಈ ಬಾರಿ ತ್ರಿವಿಕ್ರಂ (Trivikram) ಹಾಗೂ ಐಶ್ವರ್ಯಾ (Aishwarya) ಜೋಡಿ ಕ್ಯಾಪ್ಟನ್ ಆಗಿದ್ದಾರೆ. ಈ ರೀತಿ ಜೋಡಿಯೊಂದು ಒಟ್ಟಿಗೆ ಕ್ಯಾಪ್ಟನ್ ಆಗಿರೋದು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಕ್ಯಾಪ್ಟನ್ ರೂಮ್‌ನಲ್ಲಿ ವಿಶೇಷ ಸವಲತ್ತುಗಳು ಇರುತ್ತವೆ. ಇನ್ನೂ ನಿಯಮಗಳ ಪ್ರಕಾರ, ಕ್ಯಾಪ್ಟನ್ ಹೊರತು ಯಾರೂ ಕೂಡ ಈ ರೂಂನ ಬಳಕೆ ಮಾಡಬಾರದು. ಆದರೆ, ಈ ನಿಯಮವನ್ನು ತ್ರಿವಿಕ್ರಂ ಬ್ರೇಕ್ ಮಾಡಿದ್ದಾರೆ.
ಆಟದ ತಂತ್ರಗಾರಿಕೆಯ ಕುರಿತು ಮಾತನಾಡಲು ಚೈತ್ರಾರನ್ನು ಕ್ಯಾಪ್ಟನ್ ರೂಮ್‌ಗೆ ಕರೆದುಕೊಂಡು ಹೋಗಿದ್ದಾರೆ ತ್ರಿವಿಕ್ರಂ. ಇದನ್ನು ಗಮನಿಸಿದ ಐಶ್ವರ್ಯಾ ಅವರು ಕ್ಯಾಪ್ಟನ್ ಹೊರತುಪಡಿಸಿ ಮತ್ಯಾರೂ ಆ ರೂಂನ ಬಳಕೆ ಮಾಡುವಂತಿಲ್ಲ ಎಂದು ಹೇಳಿದರು. ಆದರೆ, ಇದನ್ನು ತ್ರಿವಿಕ್ರಂ ಒಪ್ಪಲಿಲ್ಲ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ- ಹೊಸ ರಿಲೀಸ್ ಡೇಟ್ ಅನೌನ್ಸ್ ಮಾಡಿದ ‘ಪುಷ್ಪ 2’ ಟೀಮ್
ಆ ಬಳಿಕ ಐಶ್ವರ್ಯಾ ಅವರು, ಚೈತ್ರಾನ ಕೈ ಹಿಡಿದು ಎಳೆದು ತರುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಚೈತ್ರಾ ಸಿಟ್ಟಾದರು. ಕೈ ಮುಟ್ಟಿ ಮಾತನಾಡಬೇಡಿ. ನನ್ನ ಕಾಲು ನೆಟ್ಟಗಿದೆ ಎಂದು ಕೂಗಾಡಿದರು ಚೈತ್ರಾ. ಆ ಬಳಿಕ ಸುಮ್ಮನಾದರು ಐಶ್ವರ್ಯಾ. ನಂತರ ತ್ರಿವಿಕ್ರಂ ಜೊತೆ ಸಿಟ್ಟು ಮಾಡಿಕೊಂಡರು. ಇಬ್ಬರ ನಡುವೆ ವಾಕ್ಸಮರ ನಡೆಯಿತು.