ಬೆಂಗಳೂರು: ಚೈತ್ರಾ ಕುಂದಾಪುರ (Chaitra Kundapura) ಹಾಗೂ ಟೀಂ ನಿಂದ ವಂಚನೆ ಪ್ರಕರಣ ಸಂಬಂಧ ದೂರುದಾರ ಸಿಸಿಬಿ ಪೊಲೀಸರ ತನಿಖೆಗೆ ಸ್ಪಂದಿಸದೇ ಇರೋದು ಬೆಳಕಿಗೆ ಬಂದಿದೆ. ಐದು ಕೋಟಿ ಹಣದ ಮೂಲದ ಬಗ್ಗೆ ದಾಖಲಾತಿ ಇನ್ನೂ ನೀಡದಿರೋದರ ಬಗ್ಗೆ ಸಿಸಿಬಿಯಿಂದ ನೋಟಿಸ್ (CCB Notice) ನೀಡಲಾಗಿದೆ.
ಉದ್ಯಮಿ ಗೋವಿಂದಬಾಬು ಪೂಜಾರಿಗೆ (GovindaBabu Poojary) ಚೈತ್ರಾ ಹಾಗೂ ಗ್ಯಾಂಗ್ ವಂಚನೆ ಪ್ರಕರಣದಲ್ಲಿ ಮತ್ತಷ್ಟು ವಿಚಾರಗಳು ಹೊರಬರುತ್ತಿವೆ. ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಜೈಲು ಸೇರಿದ್ರೆ, ಇತ್ತ ದಾಖಲಾತಿ ನೀಡೋದಾಗಿ ಹೇಳಿದ್ದ ಉದ್ಯಮಿ ಸಿಸಿಬಿ ಕಡೆ ತಲೆ ಹಾಕುತ್ತಿಲ್ಲವಂತೆ. ಹಣ ನೀಡಿರೋದ್ರ ಬಗ್ಗೆ ವಂಚನೆ ಬಗ್ಗೆ 10 ಕ್ಕೂ ಹೆಚ್ಚು ವೀಡಿಯೊಗಳಿರೋದಾಗಿ ಹೇಳಿದ್ದ ಉದ್ಯಮಿ, ಇದೀಗ ಕೇವಲ ಐದು ವೀಡಿಯೋಗಳನ್ನಷ್ಟೆ ಸಿಸಿಬಿಗೆ ನೀಡಿದ್ದಾರೆ.
ಐದು ಕೋಟಿ ಹಣವನ್ನ ಲೋನ್ ಪಡೆದು ಕೊಟ್ಟಿರೋದಾಗಿ ಹೇಳಿದ್ದ ಉದ್ಯಮಿ, ಈವರೆಗೂ ಹಣದ ಮೂಲದ ಡಾಕ್ಯುಮೆಂಟ್ಸ್ ನೀಡ್ತಿಲ್ಲ. ಲೋನ್ ಪಡೆದಿದ್ರೆ ಅದ್ರ ದಾಖಲಾತಿ ಸಲ್ಲಿಸಿ ಅಂತಾ ಸಿಸಿಬಿ ಪೊಲೀಸರು ಹೇಳಿದ್ರೂ ನೋ ಯೂಸ್. ದಾಖಲಾತಿ ಸಮೇತ ವಿಚಾರಣೆಗೆ ಬರುವಂತೆ ಎರಡು ಬಾರಿ ನೋಟಿಸ್ ನೀಡಿದರೂ ಉದ್ಯಮಿ ಗೋವಿಂದ ಬಾಬು ಪೂಜಾರಿ ಸಿಸಿಬಿ ಕಡೆ ತಲೆ ಹಾಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕೇಸ್ ಮಾಡಿಸುವಾಗ ಇದ್ದ ಉತ್ಸಾಹ ಕೇಸ್ ಮುಕ್ತಾಯವಾಗುವ ಹಂತಕ್ಕೆ ಬಂದಾಗ ಇಲ್ಲದಂತೆ ಕಾಣ್ತಿದೆ. ಎವಿಡೆನ್ಸ್ ಕೊಟ್ಟು ಹಣದ ಮೂಲ ತಿಳಿಸಿದ್ರೆ ಕೇಸ್ ಮುಗಿದು ಪೊಲೀಸ್ರು ಚಾರ್ಜ್ ಶೀಟ್‍ಗೆ ತಯಾರಿ ಮಾಡ್ಕೊಂಡಿರೋರು. ಇದೀಗ ಉದ್ಯಮಿಯ ಅಸಹಕಾರದಿಂದ ಕೇಸ್ ಕುಂಟುತ್ತಾ ಸಾಗ್ತಿದೆ.
Web Stories