ಉಡುಪಿ: ಉದ್ಯಮಿಗೆ ಚೈತ್ರಾ ಕುಂದಾಪುರ (Chaitra Kundapur) ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ 7ನೇ ಆರೋಪಿ ಶ್ರೀಕಾಂತ್ (Srikanth Naik) ಮನೆಯನ್ನು ಸಿಸಿಬಿ ಪೊಲೀಸರು (CCB Police) ಜಾಲಾಡಿದ್ದಾರೆ. ಈ ವೇಳೆ ಪೊಲೀಸರಿಗೆ 41 ಲಕ್ಷ ರೂ. ನಗದು ದೊರೆತಿದೆ.
ಗುಡ್ಡೆಯಂಗಡಿಯಲ್ಲಿರುವ (Guddeyangadi) ಶ್ರೀಕಾಂತ್ ಮನೆಯ ಬಾಕ್ಸ್‌ನಲ್ಲಿ ಇಟ್ಟಿದ್ದ 41 ಲಕ್ಷ ರೂ. ನಗದು ಪತ್ತೆಯಾಗಿದೆ. ಅದನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೊಸ ಮನೆಯ ಬಗ್ಗೆ ಶ್ರೀಕಾಂತ್ ನಾಯ್ಕ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಶ್ರೀಕಾಂತ್ 10 ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿದ್ದು, ಸುಮಾರು 70 ಲಕ್ಷ ರೂ. ಮೊತ್ತದ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ: 10 ಸಾವಿರಕ್ಕೂ ಕಷ್ಟಪಡ್ತಿದ್ದ ಚೈತ್ರಾ ಈಗ ಕೋಟ್ಯಧಿಪತಿ- 3 ಕೋಟಿ 6 ಭಾಗವಾಗಿ ಹಂಚಿದ್ದು ಹೇಗೆ?
ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಯಿಂದ ಚೈತ್ರಾ ಮತ್ತು 7 ಜನರ ಗ್ಯಾಂಗ್ ಬರೋಬ್ಬರಿ 5.50 ಕೋಟಿ ರೂ. ಪೀಕಿಸಿದೆ. ಟಿಕೆಟ್ ಸಿಗದೆ ಕಾಸು ಕಳೆದುಕೊಂಡ ಗೋವಿಂದ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚೈತ್ರಾ ಮತ್ತು ತಂಡ ಆ ಹಣವನ್ನು ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ? ರ‍್ಯಾರಿಗೆ ಎಷ್ಟೆಷ್ಟು ಹಂಚಿದ್ದಾರೆ ಎಂದು ಇನ್ನಷ್ಟೇ ವಿಚಾರಗಳು ಬಹಿರಂಗ ಆಗಬೇಕಾಗಿದೆ. ಈ ನಡುವೆ ಚೈತ್ರಾಳ ಗೆಳೆಯ ಶ್ರೀಕಾಂತ್ ನಾಯಕ್ ಗುಡ್ಡೆಯಂಗಡಿಯಲ್ಲಿ ಜಮೀನು ಖರೀದಿಸಿ ಅದರಲ್ಲಿ ಮನೆ ಕಟ್ಟಿಸಿಕೊಳ್ಳುತ್ತಿದ್ದಾನೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣ- ಇದುವರೆಗೂ 3 ಕೋಟಿಯಷ್ಟು ಮೌಲ್ಯದ ನಗದು, ಚಿನ್ನ ಜಪ್ತಿ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]