‘ಬಿಗ್ ಬಾಸ್’ ಖ್ಯಾತಿಯ ಚೈತ್ರಾ ವಾಸುದೇವನ್ (Chaithra Vasudevan) ಅವರು 2ನೇ ಮದುವೆಗೆ ಸಜ್ಜಾಗಿದ್ದಾರೆ. ಇದೀಗ ನಟಿ 2ನೇ ಮದುವೆಯಾಗುತ್ತಿರುವ ಹುಡುಗ ಯಾರೆಂಬುದು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್’ ಶೋ ಬಳಿಕ ಮೋಕ್ಷಿತಾ ಟೆಂಪಲ್ ರನ್
Advertisement
ಇತ್ತೀಚೆಗೆ ಪ್ಯಾರೀಸ್‌ನಲ್ಲಿ ಭಾವಿ ಪತಿ ಜೊತೆ ನಟಿ ಫೋಟೋಶೂಟ್ ಮಾಡಿಸಿದ್ದರು. ಈ ವೇಳೆ, ತಾವು 2ನೇ ಮದುವೆ ಆಗುತ್ತಿರೋದಾಗಿ ಚೈತ್ರಾ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದರು. ಆದರೆ ಹುಡುಗ ಯಾರು ಎಂಬುದನ್ನು ಅವರು ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಈಗ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಜಗದೀಪ್ ಎಲ್ ಎಂಬುವರ ಜೊತೆ ಚೈತ್ರಾ ಮದುವೆಗೆ ಸಜ್ಜಾಗಿದ್ದಾರೆ. ಇಬ್ಬರೂ ಪಿಂಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಇಬ್ಬರ ಕಣ್ ಕಣ್ಣ ಸಲಿಗೆಯ ಫೋಟೋ ನೋಡಿ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ. ಇದೇ ಮಾರ್ಚ್‌ನಲ್ಲಿ ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Advertisement
ಚೈತ್ರಾ ತಮ್ಮ ಡಿಗ್ರಿ ಮುಗಿಯುತ್ತಿದ್ದಂತೆ ಸತ್ಯ ನಾಯ್ಡು ಎನ್ನುವ ಉದ್ಯಮಿ ಜೊತೆ ಮದುವೆಯಾಗಿದ್ದರು. 5 ವರ್ಷಗಳ ಬಳಿಕ ಅದು ಡಿವೋರ್ಸ್‌ನಲ್ಲಿ ದಾಂಪತ್ಯ ಬದುಕು ಅಂತ್ಯವಾಗಿತ್ತು.