ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರೇ ಭೇಷ್ ಅಂದಿದ್ದ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯನ್ನು ರಾಜ್ಯ ಬಿಜೆಪಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಒಪ್ಪಂದದ ಪ್ರಕಾರ ಚೇತ್ರಾ ಶ್ರೀ ಅವರು ಬೇರೆಯವರಿಗೆ ಕುರ್ಚಿ ಬಿಟ್ಟುಕೊಡಬೇಕಿತ್ತು. ಆದ್ರೆ ಇದೀಗ ಕುರ್ಚಿ ಬಿಟ್ಟುಕೊಡದೇ ಪಕ್ಷದ ಆದೇಶಕ್ಕೆ ವಿರುದ್ಧವಾಗಿ ನಡೆದಿದ್ದು, ಮಾತು ತಪ್ಪಿದ್ದಾರೆಂದು ಚೈತ್ರಾ ಅವರಿಗೆ ಬಿಜೆಪಿ ಈ ಅಮಾನತು ಶಿಕ್ಷೆಯನ್ನು ನೀಡಿದೆ.
Advertisement
ಸದ್ಯ ಚೈತ್ರಾ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಅವರು ನಕ್ಸಲ್ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪ್ರಧಾನಿ ಪ್ರಶಂಸೆಗೆ ಒಳಗಾಗಿದ್ದರು. ಇದನ್ನೂ ಓದಿ: ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಚೈತ್ರಶ್ರೀಗೆ ಮೋದಿ ಭೇಟಿ ಅವಕಾಶ
Advertisement
Advertisement
Advertisement
ಈ ಹಿಂದೆ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಿ.ಎಸ್ ಚೈತ್ರಾ ಶ್ರೀ ಅವರು ಪ್ರಧಾನಿ ಮೋದಿ ಭೇಟಿಯ ಅವಕಾಶಕ್ಕಾಗಿ ಕೋರಿ ಪತ್ರ ಬರೆದಿದ್ದರು. ತಳ ಸಮುದಾಯದಿಂದ ಬಂದು, ವಿದ್ಯಾವಂತೆಯಾಗಿ ಸಣ್ಣ ವಯಸ್ಸಿನಲ್ಲೇ ಜಿ.ಪಂ ಅಧ್ಯಕ್ಷೆ ಸ್ಥಾನದಂತಹ ಮಹತ್ವದ ಹುದ್ದೇಗೇರಿದ ಸಾಧನೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಯಿಂದ ವಾರದ ಹಿಂದಷ್ಟೇ ಕರೆ ಬಂದಿತ್ತು. ಪ್ರಧಾನಿ ಮೋದಿ ಅವರ ಆಪ್ತ ಸಹಾಯಕರು ಕರೆ ಮಾಡಿ ಚೈತ್ರಶ್ರೀ ಬರೆದಿದ್ದ ಪತ್ರದ ಬಗ್ಗೆ ಚರ್ಚಿಸಿದ್ದರು.
ಬಿಜೆಪಿಯ ಆಂತರಿಕ ಒಪ್ಪಂದದಂತೆ ಜಿ.ಪಂ ಅಧ್ಯಕ್ಷ ಸ್ಥಾನದಿಂದ ಕಳೆದ ತಿಂಗಳು ಚೈತ್ರಶ್ರೀ ಕೆಳಗಿಳಿಯಬೇಕಿತ್ತು. ಆದ್ರೆ ಚೈತ್ರಶ್ರೀ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡದೆ ಹಠ ಮಾಡಿ ಜಿಲ್ಲಾ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿರೋ ಬೆನ್ನಲ್ಲೇ ಮೋದಿ ಭೇಟಿಗೆ ಕರೆ ಬಂದಿರೋದು ಚೈತ್ರಶ್ರೀ ಗೆ ಸಂತಸ ತಂದಿತ್ತು.