ಬೆಂಗಳೂರು: ಕಿರುತೆರೆ ನಟಿ ಚೈತ್ರಾ ರೈ ಇತ್ತೀಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈಗ ತಮ್ಮ ಮಗಳ ಫೋಟೋವನ್ನು ಇದೇ ಮೊದಲ ಸಲ ಪೋಸ್ಟ್ ಮಾಡಿದ್ದಾರೆ.
ಆಗಸ್ಟ್ 16 ರಂದು ನಾನು ತಾಯಿಯಾದೆ. ನಾನು ಯಾರನ್ನೂ ಇಷ್ಟು ಪ್ರೀತಿಸಿಲ್ಲ. ನಾನು ತಾಯಿಯಾಗುವುದನ್ನು ಪ್ರೀತಿಸುತ್ತೇನೆ. ಮಾತೃತ್ವವು ನಿಜವಾದ ಆಶೀರ್ವಾದವಾಗಿದೆ ಎಂದು ಬರೆದುಕೊಂಡು ಅವರ ಮಗುವಿನ ಮುದ್ದಾದ ಫೋಟೋಗಳನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗರ್ಭಿಣಿ ಆಗಿರುವ ವಿಚಾರ, ಸೀಮಂತ ಶಾಸ್ತ್ರದ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಗಸ್ಟ್ 16ರಂದು ಚೈತ್ರ ರಾವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ನಿಷ್ಕಾ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾಗಿ ಅಭಿಮಾನಿಗಳಿಗೆ ತಿಳಿಸಿದ್ದರು.
View this post on Instagram
ದೇವರು ಮನೆಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ಇಂದು ಹಿಂದೆಂದೂ ಅನುಭವಿಸದ ಭಾವನೆಯಾಗಿದೆ. ನಾನು ನನ್ನ ಪತಿ, ಕುಟುಂಬ ತುಂಬಾ ಸಂತೋಷವಾಗಿದ್ದೇವೆ. ನಮ್ಮ ಸಣ್ಣ ಸಂತೋಷಕ್ಕೆ ಲೆಕ್ಕವಿಲ್ಲದಷ್ಟು ಆಶೀರ್ವಾದ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದುಕೊಂಡು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಅಭಿಮಾನಿಗಳು ಇವರಿಗೆ ಕಾಮೆಂಟ್‍ಗಳ ಮೂಲಕ ಶುಭಾಶಯವನ್ನು ಕೋರಿದ್ದರು. ಇದೀಗ ಅವರು ಅವರ ಮುದ್ದು ಮಗಳಿನ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸರ್ಕಾರ ಅನ್ನದಾತನ ಮುಂದೆ ಮಂಡಿಯೂರಿದೆ: ಡಿ.ಕೆ. ಶಿವಕುಮಾರ್
View this post on Instagram
ಹಲವು ಕಾರಣಗಳಿಂದ ನಟನೆಯಿಂದ ದೂರವಿರುವ ಈ ನಟಿ ಪ್ರಸ್ತುತ ಚೈತ್ರಾ ರೈ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇದೀಗ ಅವರ ಮಗುವಿನ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.