ಕೋರ್ಟ್‌ಗೆ ಫೈರ್ ಬ್ರ್ಯಾಂಡ್ ಹಾಜರು
‘ಬಿಗ್ ಬಾಸ್ ಕನ್ನಡ 11’ರ (BBK 11) ಶೋನಿಂದ ಚೈತ್ರಾ ಕುಂದಾಪುರ (Chaithra Kundapura) ಹೊರಬಂದಿದ್ದಾರೆ. ವಂಚನೆ ಕೇಸ್ ಹಿನ್ನೆಲೆ ಇಂದು (ಡಿ.3) ಎಸಿಎಂಎಂ ಕೋರ್ಟ್ ಮುಂದೆ ಚೈತ್ರಾ ಹಾಜರಾಗಿದ್ದಾರೆ. ಇದನ್ನೂ ಓದಿ:UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್ ಟೆಂಪಲ್ ರನ್
Advertisement
Advertisement
ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ 5 ಕೋಟಿ ರೂ. ವಂಚಿಸಿರುವ ಆರೋಪ ಎದುರಿಸುತ್ತಿರುವ ಚೈತ್ರಾ ಬಿಗ್ ಬಾಸ್‌ನಿಂದ ಹೊರಬಂದು ಎಸಿಎಂಎಂ ನ್ಯಾಯಾಲಯದ ಮುಂದೆ ಅಟೆಂಡ್ ಆಗಿದ್ದಾರೆ. ಚೈತ್ರಾ, ಶ್ರೀಕಾಂತ್ ಸೇರಿದಂತೆ ಮೂವರು ಕೋಟ್‌ಗೆ ಬಂದಿದ್ದಾರೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು 2025ರ ಜ.13ಕ್ಕೆ ಮುಂದಿನ ವಿಚಾರಣೆಗೆ ದಿನಾಂಕ ಸೂಚಿಸಿದ್ದಾರೆ.
Advertisement
Advertisement
ಇನ್ನೂ ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಈ ಹಿಂದೆ ವರ್ತೂರು ಸಂತೋಷ್ ಅವರು ಒಂದು ವಾರಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಆ ನಂತರ ಬಿಗ್ ಬಾಸ್‌ಗೆ ಬಂದಿದ್ದರು. ಅದೇ ರೀತಿ ಇದೀಗ ಮತ್ತೆ ಚೈತ್ರಾ ಕೂಡ ಬಿಗ್ ಬಾಸ್‌ಗೆ ಹೋಗ್ತಾರಾ? ಎಂದು ಕಾದುನೋಡಬೇಕಿದೆ.
ಅಂದಹಾಗೆ, ಉದ್ಯಮಿ ಗೋವಿಂದ ಪೂಜಾರಿಗೆ ಎಂಎಲ್‌ಎ ಟಿಕೆಟ್ ಕೊಡಿಸೋದಾಗಿ ಚೈತ್ರಾ & ಟೀಮ್ 5 ಕೋಟಿ ರೂ. ವಂಚಿಸಿದ್ದಾರೆ ಎಂದು ಅರೆಸ್ಟ್ ಆಗಿದ್ದರು.