ಬಿಗ್ ಬಾಸ್ ಮನೆಯ ಆಟ (Bigg Boss Kannada 11) ಇದೀಗ 90ನೇ ದಿನದತ್ತ ಮುನ್ನಗ್ಗುತ್ತಿದೆ. ಅಸಲಿ ಆಟ ಶುರುವಾಗಿರೋ ಮನೆಯಲ್ಲಿ ಚೈತ್ರಾರನ್ನು ಕಳಪೆ ಎಂದು ಮನೆ ಮಂದಿ ಜೈಲಿಗಟ್ಟಿದ್ದಾರೆ. ಎಂದಿನಂತೆ ಉತ್ತಮ ಮತ್ತು ಕಳಪೆ ಚಟುವಟಿಕೆಗಳು ನಡೆದಿವೆ. ಈಗಾಗಲೇ ಅನೇಕ ಬಾರಿ ಬಿಗ್ ಬಾಸ್ ಮನೆಯ ಜೈಲು ಸೇರಿದ್ದ ಚೈತ್ರಾ ಕುಂದಾಪುರ (Chaithra Kundapura) ಮತ್ತೆ ಕಂಬಿ ಹಿಂದೆ ಹೋಗಿದ್ದಾರೆ.
Advertisement
ಬಹುತೇಕ ಸ್ಪರ್ಧಿಗಳು ಕಳಪೆಗೆ ಚೈತ್ರಾ ಕುಂದಾಪುರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಹೀಗಾಗಿ ಚೈತ್ರಾ ಕುಂದಾಪುರ ಮತ್ತೆ ಜೈಲು ಸೇರಿದ್ದಾರೆ. ಇನ್ನು ಕಳಪೆ (Kalape) ನೀಡುವ ವೇಳೆ ಎಂದಿನಂತೆ ಮಾತಿನ ಸಮರಗಳು ನಡೆದಿವೆ. ವಿಶೇಷವಾಗಿ ಚೈತ್ರಾ ಕುಂದಾಪುರಗೆ ಹನಮಂತು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:UI ಅಬ್ಬರ: ಉಪ್ಪಿ ನಟನೆ, ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕರು
Advertisement
View this post on Instagram
Advertisement
ಟಾಸ್ಕ್‌ವೊಂದರಲ್ಲಿ ಚೈತ್ರಾ ಸರಿಯಾಗಿ ಉಸ್ತುವಾರಿ ಮಾಡದೇ ಬೇಕಂತಲೇ ಫೌಲ್ ಕೊಟ್ಟರೂ ಎಂಬ ಕಾರಣಕ್ಕೆ ಮೋಕ್ಷಿತಾ, ಧನರಾಜ್ ಸೇರಿದಂತೆ ಅನೇಕರು ಕಳಪೆ ಪಟ್ಟ ನೀಡಿದರು. ಬಳಿಕ ಕಳಪೆ ಪ್ರದರ್ಶನ ಎಂದ ಹನುಮಂತ ನಡುವೆ ವಾಕ್ಸಮರ ನಡೆದಿದೆ. ಕಳಪೆ ಕೊಡಲು ನಾನು ಇಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ನೀನು ನನ್ನ ದೊಡ್ಡಪ್ಪನ ಮಗಳು, ಅತ್ತೆ ಮಗಳು ಅಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ. ಇನ್ನೂ ಮುಂದಿನ ವಾರಕ್ಕೆ ಯಾರು ನಾಯಕರಾಗುತ್ತಾರೆ ಅನ್ನೋದು ಕೂಡ ರಿವೀಲ್ ಆಗಿದೆ. ಆದರೆ ಬಿಗ್ ಬಾಸ್ ಅಧಿಕೃತವಾಗಿ ಇನ್ನೂ ಘೋಷಣೆ ಮಾಡಿಲ್ಲ. ಐಶ್ವರ್ಯಾಗೆ ಠಕ್ಕರ್ ಕೊಟ್ಟು ಭವ್ಯಾ ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿದ್ದಾರೆ.