‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಂದ್ಮೇಲೆ ಅಸಲಿ ಆಟ ಶುರುವಾಗಿದೆ. ರೋಚಕ ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಇದೀಗ ಚೈತ್ರಾ ಕೈಯಲ್ಲಿದ್ದ ಹಣವನ್ನು ಭವ್ಯಾ ಟೀಮ್ ಯಾಮಾರಿಸಿ ಕಸಿದುಕೊಂಡು ಹೋಗಿದ್ದಾರೆ. ಅದಕ್ಕೆ, ಗುಂಪು ಕಟ್ಟಿಕೊಂಡು ಬರಲ್ಲ. ಸಿಂಗಲ್ ಸಿಂಹ ರೀತಿ ಹೊಡೆಯುತ್ತೇನೆ ಎಂದು ಚೈತ್ರಾ ಖಡಕ್ ಆಗಿ ಹೇಳಿದ್ದಾರೆ.
Advertisement
‘ಬಿಗ್ ಬಾಸ್’ ಮನೆಯಲ್ಲಿ ಈಗ ನೀಲಿ ಮತ್ತು ಕೆಂಪು ಎಂಬ ಎರಡು ತಂಡಗಳು ರಚೆನೆ ಆಗಿದ್ದು, ಆ ತಂಡಗಳ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಕೆಂಪು ಬಣ್ಣದ ಟೀಮ್‌ಗೆ ಶೋಭಾ ಕ್ಯಾಪ್ಟನ್, ನೀಲಿ ಬಣ್ಣದ ಟೀಮ್‌ಗೆ ಭವ್ಯಾ ಕ್ಯಾಪ್ಟನ್ ಆಗಿದ್ದಾರೆ. ಇವೆರಡು ತಂಡಗಳ ಸದಸ್ಯರ ಬಳಿ ಹಣವಿದೆ. ಸದ್ಯ ಆ ಹಣವನ್ನು ಕಿತ್ತುಕೊಳ್ಳುವುದಕ್ಕೆ ಎರಡು ಟೀಮ್ ಕಡೆಯಿಂದ ಸ್ಕೆಚ್ ರೆಡಿ ಆಗಿದೆ. ಇದನ್ನೂ ಓದಿ:ನಾಗಾರ್ಜುನ ಅಕ್ಕಿನೇನಿ ಸೋದರಳಿಯನ ಜೊತೆ ಮೀನಾಕ್ಷಿ ಚೌಧರಿ ಮದುವೆ?- ಸ್ಪಷ್ಟನೆ ನೀಡಿದ ನಟಿ
Advertisement
Advertisement
ಇಂದು (ನ.21) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಚೈತ್ರಾ ಬಳಿಯಿದ್ದ ಹಣವನ್ನು ಭವ್ಯಾ ತಂಡದ ಗೌತಮಿ ಯಾಮಾರಿಸಿ ಎತ್ತಿಕೊಂಡು ಬಂದಿದ್ದಾರೆ. ಅದಕ್ಕೆ ಚೈತ್ರಾ (Chaithra Kundapura) ಫುಲ್ ಖಡಕ್ ಆಗಿ, ಎಲ್ಲರೂ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದ್ದಾರೆ. ಗುಂಪುಗಾರಿಕೆ ಮಾಡ್ಕೊಂಡು ಕುತಂತ್ರತನವನ್ನು ನಾನು ಮಾಡೋದಿಲ್ಲ. ಡ್ರಾಮಾ ಕ್ವೀನ್‌ಗಳು ಯಾರು ಎಂದು ಗೊತ್ತಾಯ್ತು. ನನ್ನ ಆಟವನ್ನು ಇನ್ಮೇಲೆ ಶುರು ಮಾಡ್ತೀನಿ ಎಂದು ಗುಡುಗಿದ್ದಾರೆ. ಗುಂಪು ಕಟ್ಕೊಂಡು ಪ್ಲ್ಯಾನ್ ಮಾಡ್ಕೊಂಡು ಬರಲ್ಲ, ಸಿಂಗಲ್ ಸಿಂಹ ಥರ ಹೊಡೀತಿನಿ ಅಂತ ಗರ್ಜಿಸಿದ್ದಾರೆ ಚೈತ್ರಾ.
Advertisement
View this post on Instagram
ಅಂದಹಾಗೆ, ನಿನ್ನೆಯ ಸಂಚಿಕೆಯಲ್ಲಿ (ನ.20) ಎದುರಾಳಿ ತಂಡದ ಐಶ್ವರ್ಯಾ ಬಳಿಯಿದ್ದ 2000 ಹಣವನ್ನು ಕದ್ದುಕೊಂಡು ಬಂದಿದ್ದರು ಚೈತ್ರಾ. ಇದು ಐಶ್ವರ್ಯಾಗೆ ಬಹಳ ನೋವು ತರಿಸಿತ್ತು. ಅದಕ್ಕೀಗ ಚೈತ್ರಾ ಹಣವನ್ನು ಭವ್ಯಾ ತಂಡದವರು ಯಾಮಾರಿಸಿ ತಿರುಗೇಟು ಕೊಟ್ಟಿದ್ದಾರೆ.