ಬಿಗ್ ಬಾಸ್ ಮನೆಯ (Bigg Boss Kannada 11) ಅಸಲಿ ಆಟ ಈಗ ಶುರುವಾಗಿದೆ. 70ನೇ ದಿನದತ್ತ ಆಟ ಮುನ್ನುಗ್ಗುತ್ತಿದೆ. ಇದೀಗ ಎಂದಿನಂತೆ ನಾಮಿನೇಷ್ ಪ್ರಕ್ರಿಯೆ ನಡೆದಿದೆ. ಚೈತ್ರಾರವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿದ್ದಾರೆ. ಈ ವೇಳೆ, ತ್ರಿವಿಕ್ರಮ್ ವಿರುದ್ಧ ತಿರುಗಿಬಿದ್ದ ಚೈತ್ರಾಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಶಿಶಿರ್ (Shishir) ಹೆಣ್ಮಕ್ಕಳ ಹಿಂದೆ ತಿರುಗೋ ಜೊಲ್ಲ ಎಂದು ಚೈತ್ರಾ ಹೇಳಿದ್ದನ್ನು ತ್ರಿವಿಕ್ರಮ್ ಬಾಯ್ಬಿಟ್ಟಿದ್ದಾರೆ.
Advertisement
ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ, ಬೆನ್ನಿಗೆ ಚೂರಿಯನ್ನು ಚುಚ್ಚಬೇಕು ಎಂಬ ‘ಬಿಗ್ ಬಾಸ್’ ಟಾಸ್ಕ್ ನೀಡಲಾಗಿದೆ. ಆಗ ಚೈತ್ರಾ ಅವರು ತ್ರಿವಿಕ್ರಮ್‌ಗೆ ನಾಮಿನೇಟ್ ಮಾಡಿ ಕೊಟ್ಟಿರುವ ಕಾರಣ ಸಿಟ್ಟು ತರಿಸಿದೆ. ತ್ರಿವಿಕ್ರಮ್ ರವರು ಎಲ್ಲರನ್ನು ಮ್ಯಾನಿಫುಲೇಟ್ ಮಾಡುತ್ತಾರೆ. ನೀವು ಮೋಕ್ಷಿತಾರನ್ನು ಸೈಕೋ ಎನ್ನುತ್ತೀರಾ ಎಂದು ಈ ವೇಳೆ ಚೈತ್ರಾ ಬಾಯ್ಬಿಟ್ಟಿದ್ದಾರೆ. ಅದಕ್ಕೆ ರಾಂಗ್ ಆದ ತ್ರಿವಿಕ್ರಮ್, ನೀವು ಅಣ್ಣ ಅಂತೀರಾ ಶಿಶಿರ್‌ಗೆ ಅವರನ್ನೇ ಹೆಣ್ಮುಕ್ಕಳ ಹಿಂದೆ ತಿರುಗೋ ಜೊಲ್ಲ ಎಂದಿದ್ದೀರಾ ಎಂದು ತ್ರಿವಿಕ್ರಮ್ ತಿರುಗೇಟು ನೀಡಿದ್ದಾರೆ.
Advertisement
Advertisement
ಇದನ್ನು ಕೇಳಿ ಶಿಶಿರ್‌ಗೆ ಶಾಕ್ ಆಗಿದೆ. ನಾನು ಹೀಗೆಲ್ಲಾ ಹೇಳಿಯೇ ಎಂದು ಚೈತ್ರಾ ವಾದ ಮಾಡಿದ್ದಾರೆ. ನನಗೆ ಇದರ ಬಗ್ಗೆ ಕ್ಲ್ಯಾರಿಟಿ ಸಿಗೋವರೆಗೂ ನಾನ್ ಮುಂದೆ ಹೋಗಲ್ಲ ಎಂದು ಶಿಶಿರ್ ಪಟ್ಟು ಹಿಡಿದಿದ್ದಾರೆ. ಮಾನ, ಮರ್ಯಾದೆ ಕಳೆದುಕೊಳ್ಳೋಕೆ ಬಂದಿಲ್ಲ ಇಲ್ಲಿ ಎಂದು ಶಿಶಿರ್ ಗುಡುಗಿದ್ದಾರೆ.
Advertisement
ಫೈರ್ ಬ್ರ್ಯಾಂಡ್ ಚೈತ್ರಾ ಮಾತು ಎಲ್ಲರ ತಲೆ ಕೆಡಿಸಿದೆ. ನಾಮಿನೇಷನ್ ಪ್ರಕ್ರಿಯೆಯಿಂದ ಸ್ಪರ್ಧಿಗಳ ನಡುವೆ ಬೆಂಕಿ ಬಿದ್ದಿದೆ. ಮುಂದೇನು ಆಗುತ್ತೆ ಎಂಬುದನ್ನು ಎಪಿಸೋಡ್ ನೋಡಿ ತಿಳಿದುಕೊಳ್ಳಬೇಕಿದೆ.