ಕನ್ನಡದ ‘ಟೋಬಿ’ (Toby) ಬ್ಯೂಟಿ ಚೈತ್ರಾ ಆಚಾರ್ (Chaithra Achar) ಇದೀಗ ತಮಿಳಿನತ್ತ (Tamil) ಮುಖ ಮಾಡಿದ್ದಾರೆ. ಶಶಿಕುಮಾರ್‌ಗೆ ನಾಯಕಿಯಾಗಿ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಈ ಮೂಲಕ ಫಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.
ಕನ್ನಡದ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮಿಳಿನಲ್ಲಿ ಬಂಪರ್ ಅವಕಾಶ ಸಿಕ್ಕಿದೆ. ತಮಿಳಿನ ಹೆಸರಾಂತ ನಟ ಶಶಿಕುಮಾರ್‌ಗೆ (M.Sasikumar) ಚೈತ್ರಾ ನಾಯಕಿಯಾಗಿದ್ದಾರೆ. ಹಳ್ಳಿ ಸೊಗಡಿನ ಫ್ಯಾಮಿಲಿ ಡ್ರಾಮಾದಲ್ಲಿ ನಟಿಸುತ್ತಿದ್ದಾರೆ.
ಶಶಿಕುಮಾರ್ ಮತ್ತು ಚೈತ್ರಾ ನಟನೆಯ ಸಿನಿಮಾಗೆ ರಾಜು ಮುರುಗನ್ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ತಮಿಳುನಾಡಿನ ಕೋವಿಲ್ಪಟ್ಟಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದನ್ನೂ ಓದಿ:ತೆಲುಗಿನಲ್ಲಿ ಶ್ರೀಲೀಲಾಗೆ ಮತ್ತೊಂದು ಬಂಪರ್ ಆಫರ್
ಸದ್ಯ ರಾಜ್ ಬಿ ಶೆಟ್ಟಿ ಜೊತೆ ‘ರೂಪಾಂತರ’ ಸಿನಿಮಾದಲ್ಲಿ ಚೈತ್ರಾ ನಟಿಸಿದ್ದಾರೆ. ಈ ಚಿತ್ರದ ಹಾಡು, ಪೋಸ್ಟರ್ ಸಿನಿಮಾ ರಿಲೀಸ್‌ಗೂ ಮುನ್ನು ಸದ್ದು ಮಾಡುತ್ತಿದೆ.