ನವದೆಹಲಿ: 2017-2018ರ ಅವಧಿಯಲ್ಲಿ ಒಟ್ಟು 2.97 ಕೋಟಿ ರೂ. ಮೌಲ್ಯದ ಕಳವಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಭದ್ರತಾ ದಳ (ಆರ್ ಪಿಎಫ್) ತಿಳಿಸಿದೆ.
2016-2017ರಲ್ಲಿ ಆರ್‍ಪಿಎಫ್ 5,219 ಪ್ರಕರಣ ದಾಖಲಿಸಿ 5,458 ಬಂಧಿಸಿ 1.58 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. 2017-2018ರಲ್ಲಿ ಈ ಸಂಖ್ಯೆ 5,239ಕ್ಕೆ ಏರಿಕೆಯಾಗಿದ್ದು, ವಶಪಡಿಸಿಕೊಂಡ ವಸ್ತುಗಳ ಮೌಲ್ಯ ದ್ವಿಗುಣವಾಗಿದೆ.
Advertisement
ಶೌಚಾಲಯದಲ್ಲಿ ಸರಪಳಿ ಹಾಕಿದ್ದ ಸ್ಟೀಲ್ ಮಗ್, ಬೆಡ್ ಮೇಲೆ ಹಾಕಿದ್ದ ಹಾಸಿಗೆ, ಸ್ನಾನದ ಕೊಣೆಯಲ್ಲಿನ ಶವರ್, ಕಿಟಕಿಯ ಸರಳುಗಳನ್ನು ರೈಲ್ವೆ ನಿಲ್ದಾಣದಲ್ಲಿ ಆರ್‍ಪಿಎಫ್ ವಶಪಡಿಸಿಕೊಂಡಿದೆ. ಸಾಮಾನ್ಯವಾಗಿ ಕಳ್ಳರು ಹಳಿ, ಸೂಚನಾ ಫಲಕ, ವಾಷ್ ಬೇಸಿನ್, ಕನ್ನಡಿ, ನಲ್ಲಿ, ಕೇಬಲ್, ಸೋಲಾರ್ ಪ್ಲ್ಯಾಂಟ್, ತುರ್ತು ಸಂಪರ್ಕ ಸಾಧನಗಳನ್ನು ಕಳವು ಮಾಡುತ್ತಾರೆ. ಅದರಲ್ಲೂ ಎಲೆಕ್ಟ್ರಿಕ್ ವಸ್ತುಗಳಾದ ಬ್ಯಾಟರಿ, ಎಲೆಕ್ಟ್ರಿಕ್ ಕೋಚ್ ಫ್ಯಾನ್, ಸ್ವಿಚ್ ಗಳನ್ನು ಹೆಚ್ಚು ಕಳವು ಮಾಡುತ್ತಿದ್ದರು. ಈ ವಸ್ತುಗಳು 1 ಲಕ್ಷ ಕಿ.ಮೀ. ಒಳಗಡೆಯೇ ದೊರೆತಿವೆ ಆರ್‍ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಅನುಮಾನಾಸ್ಪದ ಪ್ರಯಾಣಿಕರನ್ನು ತಡೆದು ಪರಿಶೀಲನೆಗೆ ಒಳಪಡಿಸಲಾಗಿದ್ದು, ಅವರ ಬ್ಯಾಗ್‍ನಲ್ಲಿ ಸ್ಟೀಲ್ ಮಗ್, ಹಾಸಿಗೆ ಹಾಗೂ ಕಬ್ಬಿಣದ ವಸ್ತುಗಳು ದೊರೆತಿವೆ. ಸಿಕ್ಕುಬಿದ್ದ ಆರೋಪಿಗಳಲ್ಲಿ ಹೆಚ್ಚಾಗಿ ವ್ಯಸನಕ್ಕೆ ಒಳಗಾದವರು. ಕಳ್ಳತನ ಎಸಗಿದ ಬಳಿಕ ಆ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಆರೋಪಿಗಳನ್ನು ರೈಲ್ವೇ ಕಾಯ್ದೆ ಅಡಿ ಬಂಧಿಸಲಾಗಿದೆ.
Advertisement
ಆರ್ ಪಿಎಫ್ ಗೆ ಒಟ್ಟು 74,456 ಜನ ಸಿಬ್ಬಂದಿಯ ಅವಶ್ಯವಿದೆ. ಆದರೆ, ಸದ್ಯ ಕೇವಲ 67,000 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ ಕೆಲವರನ್ನು ಪೊಲೀಸ್ ಠಾಣೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೀಗಾಗಿ ಕಳ್ಳರನ್ನು ಬಂಧಿಸಲು ಸಿಬ್ಬಂದಿಯ ಕೊರತೆ ಎದುರಾಗಿದೆ ಎಂದು ವರದಿಯಾಗಿದೆ.