ಆಕ್ಟೀವ್ ಆಗಿದೆಯಾ ಓಜಿಕುಪ್ಪಂ ಗ್ಯಾಂಗ್? ಒಂಟಿ ಮಹಿಳೆಯರೇ ಇವರ ಟಾರ್ಗೆಟ್!

Public TV
1 Min Read
NML Chain Snatchers 1

ಬೆಂಗಳೂರು/ನೆಲಮಂಗಲ: ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಓಜಿಕುಪ್ಪಂ ಗ್ಯಾಂಗ್ ಆಕ್ಟೀವ್ ಆಗಿರುವ ಶಂಕೆ ಮೂಡಿದೆ. ನೆಲಮಂಗಲ ನಗರದಲ್ಲಿ ಇತ್ತೀಚೆಗೆ ಓಜಿಕುಪ್ಪಂ ಗ್ಯಾಂಗ್ ಬೀಡುಬಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಹಾಡಹಗಲೇ ಒಂಟಿ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿ ಚಿನ್ನ ದೋಚುವ ಕೃತ್ಯಕ್ಕೆ ಮುಂದಾಗಿದ್ದಾರೆ.

NML Chain Snatchers 2

ನಗರದ ಮಾರುತಿ ಬಡಾವಣೆಯಲ್ಲಿ ಹಾಲು ತರಲು ಹೋಗಿದ್ದ ಮಹಿಳೆಯನ್ನು ಟಾರ್ಗೆಟ್ ಮಾಡಿದ ಡಿಯೋ ಬೈಕ್ ನಲ್ಲಿ ಬಂದಿದ್ದ ಇಬ್ಬರು ಕಳ್ಳರು, ಮಾಂಗಲ್ಯ ಸರಕ್ಕೆ ಕೈಹಾಕಿದ್ದಾರೆ. ಈ ವೇಳೆಯಲ್ಲಿ ಮಹಿಳೆ ಚಾಣಾಕ್ಷತನದಿಂದ ಸರವನ್ನು ಕಾಪಾಡಿಕೊಂಡಿದ್ದರು. ಆದ್ರೆ ಮಾಂಗಲ್ಲ ಸರ ಎರಡು ಮೂರು ತುಂಡಾಗಿದೆ. ಮಹಿಳೆ ಧೈರ್ಯದಿಂದ ಕಳ್ಳರಿಗೆ ಪ್ರತಿರೋಧ ವ್ಯಕ್ತಪಡಿಸಿ ಜೋರಾಗಿ ಕಿರುಚಿದಾಗ, ಚಿನ್ನಾಭರಣವನ್ನ ಬಿಟ್ಟು ಕಳ್ಳರು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ:ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

NML Chain Snatchers 3

ವೈಟ್ ಅಂಡ್ ಬ್ಲೂ ಕಲ್ಲರ್ ನ ಡಿಯೋ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಇಬ್ಬರು ಕಳ್ಳರ ಯತ್ನ ವಿಫವಾದ ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಎಸ್ಕೇಪ್ ಆಗುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಜನತೆ ಹಾಗೂ ಮಹಿಳೆಯರು ಈ ಸರಗಳ್ಳರ ಬಗ್ಗೆ ಹೆಚ್ಚು ಎಚ್ಚರವಹಿಸಬೇಕಿದೆ. ಒಂದು ದಿನದ ಹಿಂದೆಯಷ್ಟೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಕೋನಾ ವಂಶೀಕೃಷ್ಣ ಓಜಿಕುಪ್ಪಂ ಗ್ಯಾಂಗ್ ಬಗ್ಗೆ ಎಚ್ಚರವಹಿಸುವಂತೆ ತಿಳಿಸಿದ್ದರು. ಇದನ್ನೂ ಓದಿ: ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ ಎಫ್‍ಐಆರ್

Share This Article
Leave a Comment

Leave a Reply

Your email address will not be published. Required fields are marked *