ಬೆಂಗಳೂರು: ಇಷ್ಟು ದಿನ ನಗರದಲ್ಲಿ ಪಲ್ಸರ್ ಬೈಕ್, ಹೋಂಡಾ ಆಕ್ಟಿವಾ ಹಾಗೂ ಕಾರಿನಲ್ಲಿ ಬಂದು ಸರಗಳವು ಮಾಡುತ್ತಿದ್ದ ಕಳ್ಳರು ಹೊಸ ವಾಹನ ಬಳಕೆ ಮಾಡಲು ಆರಂಭಿಸಿದ್ದು, ಕೆಟಿಎಂ ಬೈಕಿನಲ್ಲಿ ಬಂದು ಸರಗಳವು ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಅನ್ನಪೂರ್ಣೇಶ್ವರಿ ನಗರ, ಸಂಜಯನಗರ, ಆರ್‍ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಟಿಎಂ ಬೈಕ್ ಸರಗಳ್ಳರು ಸದ್ದು ಮಾಡುತ್ತಿದ್ದು, ಸಂಜೆ ವೇಳೆಗೆ ಕಾರ್ಯಾಚರಣೆಗೆ ಇಳಿಯುವ ಸರಗಳ್ಳರು, ಒಂಟಿಯಾಗಿ ಓಡಾಡುವರನ್ನೇ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುವುದು ಪೊಲೀಸರ ಗಮನಕ್ಕೆ ಬಂದಿದೆ.
Advertisement
Advertisement
ಒಂಟಿಯಾಗಿ ಓಡಾಡುವ ಮಹಿಳೆಯರು ಹಾಗೂ ವೃದ್ಧರನ್ನು ಟಾರ್ಗೆಟ್ ಮಾಡುತ್ತಿರುವ ಸರಗಳ್ಳರು ಈಗಾಗಲೇ ಕೆಟಿಎಂ ಬೈಕ್ ಬಳಸಿ 10ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಕೆಟಿಎಂ ಬೈಕ್‍ನಲ್ಲಿ ಬಂದು ಸರಗಳವು ಮಾಡುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೇ ಡಿಸೆಂಬರ್ 2 ರ ಮಧ್ಯಾಹ್ನ 2 ಗಂಟೆ ವೇಳೆ ಕೆಟಿಎಂ ಬೈಕಿನಲ್ಲಿ ಬಂದ ಕಳ್ಳರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯಿಂದ ಚೈನ್ ಕದ್ದು ಪರಾರಿಯಾಗಿದ್ದಾರೆ. ಸದ್ಯ ಲಭ್ಯವಾದ ವಿಡಿಯೋ ಆಧಾರದ ಮೇಲೆ ಪೊಲೀಸರು ಕಳ್ಳರ ಬೆನ್ನು ಬಿದ್ದಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv