ಬೆಂಗಳೂರು: ನಗರದಲ್ಲಿ ಸರಗಳ್ಳನ ಮೇಲೆ ತಡರಾತ್ರಿ ಬಾಣಸವಾಡಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಸುಹೇಲ್ ಅಲಿಯಾಸ್ ಪಪ್ಪಾಯಿ ಗುಂಡೇಟಿಗೆ ಒಳಗಾದ ಸರಗಳ್ಳ. ಸುಹೇಲ್ ಗ್ಯಾಂಗ್ ಗೆ ಶರಣಾಗಲು ಪೊಲೀಸರು ಮಾಹಿತಿ ನಿಡಿದ್ದರೂ ಶರಣಾಗದೇ ಇರುವುದರಿಂದ ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ.
ನಗರದಲ್ಲಿ ಕಳೆದ ಮೂರು ದಿನಗಳಿಂದ ಸರಣಿ ಸರಗಳ್ಳತನದ ಒಂಬತ್ತು ಪ್ರಕರಣಗಳು ದಾಖಲಾಗಿತ್ತು. ಸುಹೇಲ್ ಗ್ಯಾಂಗ್ ಮಾಡಿರುವ ಖಚಿತ ಮಾಹಿತಿ ಮೇರೆಗ ಪೊಲಿಸರು ಆತನ ಬಂಧನಕ್ಕೆ ಬಾಣಸವಾಡಿ ಎಸಿಪಿ ಮಹದೇವಪ್ಪ ನೇತೃತ್ವದಲ್ಲಿ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆಯಲ್ಲಿ ಸುಹೇಲ್ ಆ್ಯಂಡ್ ಗ್ಯಾಂಗ್ ಬಾಣಸವಾಡಿ ಅಗ್ನಿಶಾಮಕದಳ ಸ್ಟೇಷನ್ ರಸ್ತೆಯಲ್ಲಿ ಇರುವುದಾಗಿ ಮಾಹಿತಿ ಬಂದಿತ್ತು.
Advertisement
Advertisement
ಸ್ಥಳಕ್ಕೆ ತೆರಳಿದ ಬಾಣಸವಾಡಿ ಇನ್ಸ್ ಪೆಕ್ಟರ್ ಮುನಿಕೃಷ್ಣ ತಂಡ ಸುಹೇಲ್ ಬಂಧನಕ್ಕೆ ಮುಂದಾಗಿತ್ತು. ಈ ವೇಳೆಯಲ್ಲಿ ಸುಹೇಲ್ ಮಾರಕಾಸ್ತ್ರದಿಂದ ಸಬ್ ಇನ್ಸ್ ಪೆಕ್ಟರ್ ಶರತ್ ಹಾಗೂ ಮುಖ್ಯಪೇದೆ ರಫಿಕ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಮುನಿಕೃಷ್ಣ ಮೂರು ಸುತ್ತು ಫೈರಿಂಗ್ ಮಾಡಿದ್ದಾರೆ. ಮೊದಲು ಶರಣಾಗುವಂತೆ ಸೂಚನೆ ನೀಡಿದ್ದರೂ ಆರೋಪಿ ಸುಹೇಲ್ ಶರಣಾಗತಿ ಆಗಲಿಲ್ಲ. ಆಗ ಇನ್ಸ್ ಪೆಕ್ಟರ್ ಸುಹೇಲ್ ಎರಡು ಕಾಲಿಗೂ ಗುಂಡು ಹಾರಿಸಿದ್ದಾರೆ. ಹಲ್ಲೆಗೊಳಗಾದ ಸುಹೇಲ್ ಹಾಗೂ ಪೊಲೀಸರನ್ನು ಚಿಕಿತ್ಸೆಗೆ ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
Advertisement
Advertisement
ಸದ್ಯ ಸುಹೇಲ್ ಜೊತೆಯಿದ್ದ ಇಬ್ಬರು ಪರಾರಿಯಾಗಿದ್ದಾರೆ. ಸುಹೇಲ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ.
ಸದ್ಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv