ನಾಗ್ಪುರ: ಬಾಂಗ್ಲಾದೇಶದ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಇತ್ತಂಡಗಳು ತಲಾ 1 ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲದಲ್ಲಿ ಹೋರಾಟ ಮಾಡುತ್ತಿದ್ದು, ಸರಣಿ ಕೈವಶ ಮಾಡಿಕೊಳ್ಳಲು ಭಾನುವಾರ ನಡೆಯಲಿರುವ ನಾಗ್ಪುರದಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ತಂಡಗಳು ಸಿದ್ಧತೆ ನಡೆಸಿದೆ. ಇದೇ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ ವಿಶೇಷ ದಾಖಲೆ ಬರೆಯಲು 1 ವಿಕೆಟ್ ಮಾತ್ರ ಬಾಕಿ ಇದೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ಪಂದ್ಯದಲ್ಲಿ ಚಹಲ್ ಮತ್ತೊಂದು ವಿಕೆಟ್ ಗಳಿಸಿದರೆ ಭಾರತ ಪರ ಅತ್ಯಧಿಕ ವಿಕೆಟ್ ಪಡೆದ ಲೇಗ್ ಸ್ಪಿನ್ನರ್ ಆಟಗಾರರ ಎಂಬ ಹೆಗ್ಗಳಿಕೆಯನ್ನು ಪಡೆಯಲಿದ್ದಾರೆ. ಟೀಂ ಇಂಡಿಯಾ ಪರ ಆರ್.ಅಶ್ವಿನ್ ಟಿ20 ಮಾದರಿಯಲ್ಲಿ 52 ವಿಕೆಟ್‍ಗಳೊಂದಿಗೆ ಮೊದಲ ಹಾಗೂ ಜಸ್ಪ್ರೀತ್ ಬುಮ್ರಾ 51 ವಿಕೆಟ್ ಗಳಿಂದ 2ನೇ ಸ್ಥಾನದಲ್ಲಿದ್ದು, ಚಹಲ್ ಈ ಸಾಧನೆ ಮಾಡಿದ 3 ಬೌಲರ್ ಎನಿಸಿಕೊಳ್ಳಲಿದ್ದಾರೆ.
Advertisement
Advertisement
ಬಾಂಗ್ಲಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಚಹಲ್ 1 ವಿಕೆಟ್ ಪಡೆದರೆ, 2ನೇ ಪಂದ್ಯದಲ್ಲಿ 2 ಪ್ರಮುಖ ವಿಕೆಟ್ ಗಳನ್ನು ಉರುಳಿಸಿದ್ದರು. ಸದ್ಯ ನಾಗ್ಪುರದ ಪಂದ್ಯದಲ್ಲಿ ಚಹಲ್ ವಿಶೇಷ ಸಾಧನೆ ಮಾಡುವ ಅವಕಾಶ ಪಡೆದಿದ್ದಾರೆ. ಅಲ್ಲದೇ ಪಂದ್ಯದಲ್ಲಿ 4 ವಿಕೆಟ್ ಪಡೆದರೆ ಅಶ್ವಿನ್‍ರನ್ನು ಹಿಂದಿಕ್ಕಿ ನಂ.1 ಪಟ್ಟ ಪಡೆಯಲಿದ್ದಾರೆ.
Advertisement
ಇತ್ತ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳವ ಒತ್ತಡ 2 ತಂಡಗಳಿಗಿದ್ದು, ಭಾರತ ವಿರುದ್ಧ ಮೊದಲ ಟಿ20 ಪಂದ್ಯ ಗೆಲುವು ಪಡೆದಿರುವ ಬಾಂಗ್ಲಾ ಸರಣಿಯ ಗೆಲುವಿನ ಲೆಕ್ಕಾಚಾರದಲ್ಲಿದೆ. ಟೀಂ ಇಂಡಿಯಾ ಪರ ಅಂತಿಮ ಪಂದ್ಯಕ್ಕೆ ಆಡುವ 11 ಬಳಗದಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಗಳಿಲ್ಲ. ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆಡುತ್ತಿರುವ ಪರಿಣಾಮ ರೋಹಿತ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಈಗಾಗಲೇ 2ನೇ ಪಂದಲ್ಲಿ ಗೆಲ್ಲುವ ಮೂಲಕ ರೋಹಿತ್ ಬಳಗ ಬಾಂಗ್ಲಾ ತಂಡಕ್ಕೆ ತಿರುಗೇಟು ನೀಡಿದೆ. ಕಳೆದ ಪಂದ್ಯದಂತಯೇ ನಾಗ್ಪುರದ ಪಿಚ್ ಬ್ಯಾಟಿಂಗ್ ಗೆ ಸಹಕಾರ ನೀಡುವ ನಿರೀಕ್ಷೆ ಇದ್ದು, ಮತ್ತೊಂದು ರೋಚಕ ಹೋರಾಟ ನಿರೀಕ್ಷಿಸಬಹುದಾಗಿದೆ.