ರಾಯಚೂರು: ಜಿಲ್ಲೆಯಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ರಾತ್ರಿಯಾದ್ರೆ ಸಾಕು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಕಳ್ಳರ ಗ್ಯಾಂಗೊಂದು ನಗರದಲ್ಲಿ ಬೀಡು ಬಿಟ್ಟಿದ್ದು, ಪ್ರತಿನಿತ್ಯ ಒಂದಿಲ್ಲೊಂದು ಕಡೆ ಕಳ್ಳತನ ನಡೆಯುತ್ತಿವೆ.
ಚಡ್ಡಿ ಹಾಕಿಕೊಂಡು ಕೈಯಲ್ಲಿ ಆಯುಧ ಹಿಡಿದು ಓಡಾಡುವ ಈ ಗ್ಯಾಂಗ್ ತುಂಬಾನೇ ಡೆಂಜರಸ್ ಅಂತೆ. ನಗರದ ಒಂಬತ್ತು ರೈಸ್‍ಮಿಲ್, ಅಪಾರ್ಟ್ ಮೆಂಟ್, ಮನೆಗಳು ಸೇರಿದಂತೆ ನಿತ್ಯ ಒಂದಿಲ್ಲೊಂದು ಭಾಗದಲ್ಲಿ ಕಳ್ಳತನ ನಡೆಯುತ್ತಲೇ ಇವೆ.
Advertisement
Advertisement
ನಗರದ ಕೃಷಿ ವಿವಿ ಬಳಿಯ ಮೈತ್ರಿ ಟವರ್ಸ್ ಅಪಾರ್ಟ್ ಮೆಂಟ್‍ನಲ್ಲಿ ಎರಡು ಮನೆ ಕಳ್ಳತನ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ಕದ್ದು ಬರುವ ವೇಳೆ ಕಳ್ಳರ ಮುಖಚರ್ಯೆಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ರೈಸ್ ಮಿಲ್ ಗಳು ಸೇರಿ ಎಲ್ಲೆಡೆಯೂ ಕಾಂಪೌಂಡ್ ಹಾರಿ ಬೀಗ ಮುರಿದು ಒಂದೇ ರೀತಿಯಲ್ಲೇ ಕಳ್ಳತನ ಮಾಡಿದ್ದಾರೆ ಎಂದು ಮನೆ ಮಾಲೀಕರಾದ ಅಶ್ವಿನಿ ಹೇಳಿದ್ದಾರೆ.
Advertisement
ಮೂರು ವರ್ಷಗಳ ಕೆಳಗೆ ರಾಯಚೂರಿನಲ್ಲಿ ಚಡ್ಡಿ ಗ್ಯಾಂಗ್ ಹಾವಳಿ ಜೋರಾಗಿತ್ತು, ಈಗ ಮತ್ತೆ ಶುರುವಾಗಿದೆ. ಬರಗಾಲವಿದ್ದಾಗಲೆಲ್ಲಾ ಈ ರೀತಿಯ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಲಿವೆ. ಹರಣಿ ಶಿಕಾರಿ ಅಥವಾ ಪಾರ್ಸಿ ಅಲೆಮಾರಿ ಗ್ಯಾಂಗ್ ಗಳು ಈ ರೀತಿಯ ಕಳ್ಳತನಗಳನ್ನ ಮಾಡುತ್ತಾರೆ ಎನ್ನಲಾಗುತ್ತಿದೆ. ಓಡಲು ಸುಲಭವಾಗಬೇಕು ಅಂತ ಚಡ್ಡಿಯನ್ನ ಹಾಕಿಕೊಂಡು ಕಳ್ಳತನ ಮಾಡುತ್ತಾರಂತೆ ಎಂದು ಸ್ಥಳೀಯ ಅಶೋಕ್ ಜೈನ್ ತಿಳಿಸಿದ್ದಾರೆ.
Advertisement
ಕಳೆದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ. ನಿಜಕ್ಕೂ ಒಂದೇ ಗ್ಯಾಂಗ್ ರಾಯಚೂರಿನಲ್ಲಿ ಎಲ್ಲಡೆ ಕಳ್ಳತನ ನಡೆಸಿದೆಯಾ? ಇಲ್ಲಾ ಪ್ರತ್ಯೇಕ ಗ್ಯಾಂಗ್ ಗಳು ಕಳ್ಳತನ ಮಾಡುತ್ತಿವೆಯಾ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಕಳ್ಳತನ ಮಾಡುವ ರೀತಿ ಮಾತ್ರ ಎಲ್ಲಾ ಪ್ರಕರಣಗಳಲ್ಲೂ ಒಂದೇ ಆಗಿದೆ. ಈಗಲಾದರೂ ಪೊಲೀಸ್ ಇಲಾಖೆ ಕಳ್ಳರ ಬಂಧನಕ್ಕೆ ಮುಂದಾಗಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv