ಎಲ್ಲ ಸ್ನ್ಯಾಕ್ಸ್‌ಗಳಿಗೆ ಚಾಟ್ ಮಸಾಲಾ ಬೇಕೆಬೇಕು. ಚಾಟ್ ಮಸಾಲಾ ಹಾಕದೇ ಹೋದ್ರೆ ಪಾಪ್ರಿ ಚಾಟ್, ಪಾನಿಪುರಿ ಇನ್ನೂ ಮುಂತಾದ ಸ್ನ್ಯಾಕ್ಸ್‌ಗಳು ಪೂರ್ಣವಾಗುವುದೇ ಇಲ್ಲ. ಅದರಲ್ಲಿಯೂ ಈಗ ಹಣ್ಣು ಅಥವಾ ತರಕಾರಿಗಳ ಸಲಾಡ್‌ಗೂ ಚಾಟ್ ಮಸಾಲಾ ಬೇಕು. ಅದಕ್ಕೆ ನೀವು ಮನೆಯಲ್ಲಿ ಸಿಂಪಲ್ ಆಗಿ ಚಾಟ್ ಮಸಾಲಾ ಇಂಡಿಯನ್ ರೆಸಿಪಿಯಲ್ಲಿ ಮಾಡುವುದು ಹೇಗೆ ಎಂದು ಹೇಳಿಕೊಡಲಾಗುತ್ತೆ.
Advertisement
ಬೇಕಾಗುವ ಪದಾರ್ಥಗಳು:
* ಜೀರಿಗೆ ಬೀಜಗಳು – 12 ಗ್ರಾಂ
* ಕೊತ್ತಂಬರಿ ಬೀಜಗಳು – 1 ಚಮಚ
* ಸೋಂಪು ಕಾಳುಗಳು – 1, 1/2 ಟೀಸ್ಪೂನ್
* ಅಜ್ವೈನ್ ಬೀಜಗಳು – 1, 1/2 ಟೀಸ್ಪೂನ್
* ಒಣಗಿದ ಪುದೀನಾ – 3 ಗ್ರಾಂ
* ಕಾಲಾ ನಮಕ್ ಪುಡಿ – 13 ಗ್ರಾಂ
Advertisement
* ಡೈಮಂಡ್ ಕ್ರಿಸ್ಟಲ್ ಕೋಷರ್ ಉಪ್ಪು – 5 ಗ್ರಾಂ
* ಹುಣಸೆ ಪುಡಿ – 16 ಗ್ರಾಂ
* ಕರಿಮೆಣಸು – 2 ಗ್ರಾಂ
* ಕಾಶ್ಮೀರಿ ಕೆಂಪು ಮೆಣಸಿನ ಪುಡಿ – 12 ಗ್ರಾಂ
* ಶುಂಠಿ ಪುಡಿ – 2 ಗ್ರಾಂ
Advertisement
Advertisement
ಮಾಡುವ ವಿಧಾನ:
* ಮಧ್ಯಮ ಶಾಖದಲ್ಲಿ ಗ್ಯಾಸ್ ಮೇಲೆ ಪ್ಯಾನ್ ಇಟ್ಟು ಅದಕ್ಕೆ ಜೀರಿಗೆ ಬೀಜಗಳು, ಕೊತ್ತಂಬರಿ ಬೀಜಗಳು, ಸೋಂಪು ಕಾಳುಗಳು ಮತ್ತು ಅಜ್ವೈನ್‌ನ್ನು ಬೆಚ್ಚಗಿನ ಮಾಡಿ.
* ಫ್ರೈ ಮಾಡುವ ವೇಳೆ ಬೀಜಗಳು ಸುಡದಂತೆ ನೋಡಿಕೊಳ್ಳಿ. ನಂತರ ಆ ಮಿಶ್ರಣವನ್ನು ತಣ್ಣಗಾಗಲು ಬಿಡಿ.
* ಬಾಣಲಿಗೆ ಒಣಗಿದ ಪುದೀನಾ ಎಲೆ, ಕಲಾ ನಮಕ್, ಉಪ್ಪು, ಹುಣಸೆ ಪುಡಿ, ಕರಿಮೆಣಸು, ಮೆಣಸಿನ ಪುಡಿ ಮತ್ತು ಶುಂಠಿ ಪುಡಿಯೊಂದಿಗೆ ಎಲ್ಲಾ ಮಸಾಲೆಗಳನ್ನು ಮಧ್ಯಮ ಉರಿಯಲ್ಲೇ ಬೇಯಿಸಿ.
* ಕೊನೆಗೆ ಎಲ್ಲವನ್ನು ಮಿಕ್ಸ್ ಮಾಡಿ. ಎಲ್ಲ ಮಸಾಲೆ ಗ್ರೈಂಡರ್ ಹಾಕಿ ನುಣ್ಣಗೆ ಪುಡಿಮಾಡಿ. ಈ ಮಿಶ್ರಣವನ್ನು 3 ಗಂಟೆಗಳ ಕಾಲ ತಣ್ಣಗಾಗಲು ಬಿಡಿ.
ಈ ಇಂಡಿಯಾನ್ ಸ್ಟೈಲ್ ಚಾಟ್ ಮಸಾಲಾವನ್ನು ಮನೆಯಲ್ಲಿ ಸಲಾಡ್ ಮತು ಚಾಟ್ಸ್‌ಗಳಿಗೆ ಮಿಕ್ಸ್ ಮಾಡಿಕೊಂಡು ಸವಿಯಿರಿ.