ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಇದುವರೆಗೂ ಪ್ರತ್ಯಕವಾಗಿಯೇ ಸೀಟು ಹಂಚಿಕೆ ಪ್ರಕ್ರಿಯೆ ನಡೆಸುತ್ತಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಪ್ರಸಕ್ತ ಸಾಲಿನಿಂದ (2023-24) ಎಲ್ಲವನ್ನೂ ಒಟ್ಟಿಗೆ ನಡೆಸಲು ತೀರ್ಮಾನಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಸುಧಾರಣಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಆರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ (Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು ಎಂದು ರಮ್ಯಾ ವಿವರಿಸಿದ್ದಾರೆ. ಇದನ್ನೂ ಓದಿ: ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಾಲಾ, ಕಾಲೇಜುಗಳಿಗೆ ರಜೆ
Advertisement
ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೆ ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್‌ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು ಎಂದು ನಿರ್ದೇಶಕಿ ರಮ್ಯಾ ಹೇಳಿದ್ದಾರೆ. ಅಲ್ಲದೇ ಅಭ್ಯರ್ಥಿಗಳು ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಯ್ಕೆಯನ್ನು ನಮೂದಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಆ.10 ಡೆಡ್‌ಲೈನ್ – ಬಂದ್ ಹಿಂಪಡೆದ ಖಾಸಗಿ ಸಾರಿಗೆ ಸಂಘಟನೆಗಳು
Advertisement
Advertisement
ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?
ಅಭ್ಯರ್ಥಿಯು ಆಯ್ಕೆಯನ್ನು ನಮೂದಿಸುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್‌ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಉದಾಹರಣೆಗೆ ವೈದ್ಯಕೀಯ (Medical) ಕೋರ್ಸ್ ಬೇಕೆಂದು ಮೊದಲ ಆದ್ಯತೆ ನೀಡುವ ಅಭ್ಯರ್ಥಿ, ಒಂದು ವೇಳೆ ಅದು ಸಿಗದಿದ್ದಾಗ ತನ್ನ ಆದ್ಯತೆ ಎಂಜಿನಿಯರಿಂಗ್ (Engineering) ಎನ್ನುವುದನ್ನು ದಾಖಲಿಸಬೇಕು. ಆಗ ವೈದ್ಯಕೀಯ ಸೀಟು ಸಿಗದಿದ್ದಾಗ ನಂತರದ ಆದ್ಯತೆಯಾದ ಎಂಜಿನಿಯರಿಂಗ್‌ನಲ್ಲಿ ಸೀಟು ಹಂಚಿಕೆ ಆಗುತ್ತದೆ. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್‌ಗಳು ಇವೆಯೋ ಅಷ್ಟೂ ಕೋರ್ಸ್‌ಗಳಿಗೆ ಆದ್ಯತೆಯನುಸಾರ ತನ್ನ ಆಯ್ಕೆಯನ್ನು ನಮೂದಿಸುವ ಮೂಲಕ ಸೀಟು ಪಡೆಯಬಹುದು.
Advertisement
ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಯ್ಕೆಯ ನಮೂದಿನ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್‌ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್‌ನಲ್ಲಿ ವೈದ್ಯಕೀಯ ಅಥವಾ ಎಂಜಿನಿಯರಿಂಗ್ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಚಲನ್ ಮೂಲಕ ಶುಲ್ಕ ಪಾವತಿಸಿ ಅಡ್ಮಿಷನ್ ಆರ್ಡರ್ ಅನ್ನು ಆನ್‌ಲೈನ್ ಮೂಲಕ ಪಡೆದು ಸಂಬಂಧಪಟ್ಟ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಅದನ್ನು ಕಾಲೇಜಿನ ಪೋರ್ಟಲ್‌ನಲ್ಲಿ ತಪ್ಪದೇ ಅಪ್‌ಡೇಟ್ ಮಾಡಿಸಬೇಕು. ಒಂದು ವೇಳೆ ಹಾಗೆ ಮಾಡದಿದ್ದರೆ ಸದರಿ ಸೀಟು ಖಾಲಿ ಇದೆ ಎಂದು ಭಾವಿಸಿ ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳುವ ಸಾಧ್ಯತೆಯಿರುತ್ತದೆ.
ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಅಭ್ಯರ್ಥಿ ನಮೂದಿಸಿರುವ ಆಯ್ಕೆಯ ಪ್ರಕಾರ ಯಾವುದಾದರೊಂದು ಕೋರ್ಸ್‌ನಲ್ಲಿ (ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ ಇತ್ಯಾದಿ) ಸೀಟು ಪಡೆಯಬೇಕು. ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆಯ ನಂತರ ಕಡ್ಡಾಯವಾಗಿ ತಮಗೆ ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸಿ ಪ್ರವೇಶ ಪಡೆಯಬೇಕು. ಇಲ್ಲದಿದ್ದರೆ ಸದರಿ ಸೀಟುಗಳನ್ನು ದಂಡದ ಮೊತ್ತ ಪಾವತಿಸಿ ರದ್ದುಪಡಿಸಬೇಕು. ಎರಡನೇ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಲು ಅರ್ಹತೆ ಇರುವುದಿಲ್ಲ. ಆದರೆ ಎರಡನೇ ಸುತ್ತಿನಲ್ಲಿ ದಂತ ವೈದ್ಯಕೀಯ ಸೀಟು ದೊರೆತ ಅಭ್ಯರ್ಥಿಗಳು ಸೀಟನ್ನು ರದ್ದುಪಡಿಸದೇ ವೈದ್ಯಕೀಯ ಕೋರ್ಸ್‌ನ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಎಂಜಿನಿಯರಿಂಗ್ ಸೀಟುಗಳಿಗೆ ಮೂರನೇ ಸುತ್ತಿನವರೆಗೂ ಭಾಗವಹಿಸಬಹುದು. ಆದರೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ. ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಚಾಯ್ಸ್-3 ಕೊಟ್ಟಿರುವ ಅಭ್ಯರ್ಥಿಗಳು ಹಾಗೂ ಯಾವುದೇ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳ ಮೊದಲೆರಡು ಸುತ್ತಿನಲ್ಲಿ ನಮೂದಿಸಿದ್ದ ಆಯ್ಕೆಗಳನ್ನು ಡಿಲೀಟ್ ಮಾಡಲಾಗಿರುತ್ತದೆ. ಅಭ್ಯರ್ಥಿಯು ಮೂರನೇ ಸುತ್ತಿಗೆ ಹೊಸದಾಗಿ ಆಯ್ಕೆಯನ್ನು ನಮೂದಿಸಬೇಕು. ಮೂರನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳು ಶುಲ್ಕದ ಐದು ಪಟ್ಟು ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರಿಕೆಯಿಂದಲೇ ಮೂರನೇ ಸುತ್ತಿನ ಆಯ್ಕೆಯನ್ನು ನಮೂದಿಸಬೇಕು.
ಮಾಪ್‌ಅಪ್ ಸುತ್ತು:
ಎರಡನೇ ಸುತ್ತಿನಲ್ಲಿ ಎಂಜಿನಿಯರಿಂಗ್, ನರ್ಸಿಂಗ್, ಆರ್ಕಿಟೆಕ್ಚರ್, ಪಶುವೈದ್ಯಕೀಯ, ಕೃಷಿ ಸೀಟು ದೊರೆತ ಅಭ್ಯರ್ಥಿಗಳು ದಂಡ ಪಾವತಿಸಿ, ತಮ್ಮ ಸೀಟನ್ನು ರದ್ದುಪಡಿಸಿದ ನಂತರವೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ನ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಬಹದು. ಅದೇ ರೀತಿ ಎರಡನೇ ಸುತ್ತಿನಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಸೀಟುಗಳು ಹಂಚಿಕೆಯಾದ ಅಭ್ಯರ್ಥಿಗಳು ಸದರಿ ಸೀಟುಗಳನ್ನು ದಂಡ ಪಾವತಿಸಿ ರದ್ದುಪಡಿಸಿದ ನಂತರ ಎಂಜಿನಿಯರಿಂಗ್ ಮಾಪ್‌ಅಪ್ ಸುತ್ತಿನಲ್ಲಿ ಭಾಗವಹಿಸಬಹುದು. ಇದನ್ನೂ ಓದಿ: ಗೃಹಲಕ್ಷ್ಮಿ ನೋಂದಣಿಗೆ ಹಣ ವಸೂಲಿ – ಸೈಬರ್ ಕೇಂದ್ರಗಳಿಗೆ ಬೀಗ ಜಡಿದ ಅಧಿಕಾರಿಗಳು
Web Stories