ಯಾದಗಿರಿ: ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಮನ್ನಿಕೇರಿ ಅವರು ಮನೆ ಮುಂದೆ ಶೌಚಾಲಯ ಕಟ್ಟಿಸಿಕೊಳ್ಳದೆ ಬಯಲು ಶೌಚಾಲಯಕ್ಕೆ ತೆರಳುತ್ತಿದ್ದ ಯುವಕನಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಸಿಇಓ ಕವಿತಾ ಮನ್ನಿಕೇರಿ ಸಭೆಯ ನಿಮಿತ್ತ ಯಾದಗಿರಿಯಿಂದ ವಿಜಯಪುರಕ್ಕೆ ತೆರಳುತ್ತಿದ್ದರು. ಇದೇ ಮಾರ್ಗದ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಯುವಕನೊಬ್ಬ ಬಯಲಲ್ಲಿ ಶೌಚಕ್ಕೆ ತೆರಳುತ್ತಿದ್ದನ್ನು ಕಂಡಿದ್ದಾರೆ. ಕೂಡಲೇ ತಮ್ಮ ವಾಹನವನ್ನು ನಿಲ್ಲಿಸಿ ಯುವಕನನ್ನು ನಿಲ್ಲಿಸಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
Advertisement
ವಿದ್ಯಾವಂತರಾದ ನೀವೇ ಹೀಗೆ ಬಯಲಲ್ಲಿ ಶೌಚಕ್ಕೆ ಹೋಗುವುದು ಎಷ್ಟು ಸರಿ? ಬೆಲೆ ಬಾಳುವ ಮೊಬೈಲ್‍ಗಳನ್ನು ಜೇಬಿನಲ್ಲಿರಿಸಿಕೊಳ್ಳುತ್ತೀರಿ. ನಿಮಗೆ ಶೌಚಾಲಯವನ್ನು ಕಟ್ಟಿಸಿಕೊಳ್ಳೋಕೆ ಆಗುವುದಿಲ್ಲವೇ ಎಂದು ಯುವಕನಿಗೆ ಪ್ರಶ್ನಿಸಿದರು. ಅಲ್ಲದೆ ಕೆಂಡಾಮಂಡಲರಾಗಿದ್ದ ಅವರು ಮೊದಲು ಶೌಚಾಲಯ ಕಟ್ಟಿ ಬಳಿಕ ಮನೆ ನಿರ್ಮಾಣ ಮಾಡೋದನ್ನು ಕಲಿಯಿರಿ ಎಂದು ಕಿಡಿಕಾರಿದ್ರು.
Advertisement
ಸರ್ಕಾರ ಬಯಲು ಮುಕ್ತ ರಾಜ್ಯ ಮಾಡಲು ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದರೂ ಜನರು ಮಾತ್ರ ಇನ್ನು ಜಾಗೃತಿಗೊಂಡು ಶೌಚಾಲಯ ಕಟ್ಟಿಸಿಕೊಳ್ಳದೇ ಬಯಲು ಪ್ರದೇಶಕ್ಕೆ ಹೋಗುವುದು ಎಷ್ಟು ಸರಿ. ಸಿಇಓ ಮನ್ನಿಕೇರಿ ಅವರು ಶೌಚಾಲಯದ ಬಗ್ಗೆ ಜನರಿಗೆ ಖಡಕ್ ವಾರ್ನಿಂಗ್ ಕೊಟ್ಟು ಎಚ್ಚರಿಸಿದ್ದಕ್ಕೆ ಇದೀಗ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv