ನವದೆಹಲಿ: ದೇಶಾದ್ಯಂತ ಟೊಮೆಟೋ ದರದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬೆಲೆ ಏರಿಕೆಗೆ ಮೂಗುದಾರ ಹಾಕಲು ಮುಂದಾಗಿದೆ.
ಹೌದು. ಕಳೆದ ಒಂದು ತಿಂಗಳಿಂದ ಟೊಮೆಟೋ ದರ (Tomato Price) ಗಗನಕ್ಕೇರಿದೆ. ಇದೀಗ ದರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಮಂಡಿಗಳಿಂದ ಟೊಮೆಟೋ ಖರೀದಿಸಿ ಸಾರ್ವಜನಿಕ ಬಳಕೆಗೆ ವಿತರಣೆ ಮಾಡುವಂತೆ ಸಹಕಾರಿ ಸಂಸ್ಥೆಗಳಾದ ನಾಫೆಡ್ ಮತ್ತು ಎನ್‍ಸಿಸಿಎಫ್‍ಗೆ ನಿರ್ದೇಶನ ನೀಡಿದೆ. ಟೊಮೆಟೋ ಬೆಲೆ ಹೆಚ್ಚಳವಿರುವ ನಗರಗಳಿಗೆ ಪೂರೈಕೆ ಮಾಡುವಂತೆ ಆದೇಶಿಸಿದೆ.
Advertisement
Advertisement
ಭಾರೀ ಮಳೆಯಿಂದಾಗಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೋ ದರ 200 ರೂಪಯಿಯ ಗಡಿ ದಾಟಿದೆ. ಹೀಗಾಗಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ದಕ್ಷಿಣದ ರಾಜ್ಯಗಳಿಂದ ಟೊಮೆಟೋ ಖರೀದಿಸಲಿದೆ. ಇದನ್ನೂ ಓದಿ: ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ
Advertisement
Advertisement
ಜುಲೈ-ಆಗಸ್ಟ್ ಮತ್ತು ಅಕ್ಟೋಬರ್-ನವೆಂಬರ್ ಸಾಮಾನ್ಯವಾಗಿ ಟೊಮೆಟೋಗಳಿಗೆ ಕಡಿಮೆ ಉತ್ಪಾದನೆಯ ತಿಂಗಳುಗಳಾಗಿವೆ. ಆದರೆ ಇದು ಬೇಡಿಕೆಗೆ ಅನುಗುಣವಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ದರ ಏರಿಕೆ ಈ ತಿಂಗಳುಗಳಲ್ಲಿ ಸಾಮಾನ್ಯವಾಗಿರುತ್ತದೆ. ಆಗಸ್ಟ್ ಹೊತ್ತಿಗೆ ಟೊಮೆಟೋ ದರ ಇಳಿಯಬಹುದು ಎಂದು ಸಚಿವಾಲಯ ತಿಳಿಸಿದೆ.
ಈ ಮಧ್ಯೆ ರಾಜ್ಯದ ರೈತರಿಗೆ ಟೊಮೆಟೋ ಬೆಳೆ ಕಳ್ಳರ ಪಾಲಾಗೋದನ್ನು ತಡೆಯೋದೆ ದೊಡ್ಡ ಕೆಲಸವಾಗಿದೆ. ದಾವಣಗೆರೆಯ ಮಾಯಕೊಂಡದಲ್ಲಿ ರೈತರು ಟೊಮೆಟೋ ಹೊಲಗಳಲ್ಲಿ ಹಗಲುರಾತ್ರಿ ದೊಣ್ಣೆ ಹಿಡಿದು ನಾಯಿ ಸಮೇತ ಕಾವಲು ಕಾಯ್ತಿದ್ದಾರೆ. ಕೋಲಾರದ ಹುತ್ತೂರಿನಲ್ಲಿ ಸತೀಶ್ ಎನ್ನುವವರ ಹೊಲದಿಂದ ಟೊಮೆಟೋ ಕಳುವಾಗಿದೆ. ಹೀಗಾಗಿ ಸತೀಶ್ ಕುಟುಂಬ ಉಳಿದ ಬೆಳೆ ರಕ್ಷಿಸಿಕೊಳ್ಳಲು ಇಡೀ ರಾತ್ರಿ ನಿದ್ದೆಗೆಟ್ಟಿದೆ. ಚಿಕ್ಕಬಳ್ಳಾಪುರದಲ್ಲಿಯೂ ಇದೇ ಪರಿಸ್ಥಿತಿ ಇದೆ.
Web Stories