ನವದೆಹಲಿ: ಸರಣಿ ಅಪಘಾತಗಳ ಬಳಿಕ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru- Mysuru Highway) ರಸ್ತೆ ಸುರಕ್ಷತಾ ಕ್ರಮಗಳಿಗಾಗಿ 688 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ನಿರ್ಧರಿಸಿದೆ. ಇತ್ತಿಚೇಗೆ ನಡೆದ ಸಮೀಕ್ಷಾ ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರದಿಂದ ಬಿಡ್ ಕೂಡಾ ಕರೆಯಲಾಗಿದೆ.
Advertisement
ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿರುವ ಅಪಾಯಕಾರಿ ತಾಣಗಳು, ಗ್ರೇಡಿಯಂಟ್ ಸಮಸ್ಯೆಗಳನ್ನು ಸರಿಪಡಿಸಲು, ರಸ್ತೆಯಲ್ಲಿ ಹೆಚ್ಚಿನ ಬೆಳಕಿಗಾಗಿ ಲೈಟಿಂಗ್ ವ್ಯವಸ್ಥೆ, ಪಾದಾಚಾರಿಗಳಿಗೆ ಮೇಲ್ಸೇತುವೆಗಳು, ಎಚ್ಚರಿಕೆ ಫಲಕಗಳು, ಹೆಡ್‍ಲೈಟ್ ಪ್ರತಿಫಲಕಗಳು, ರಸ್ತೆ ಗುರುತುಗಳು, ಗಾರ್ಡ್ ರೈಲ್‍ಗಳು ಮತ್ತು ಕ್ರ್ಯಾಶ್ ಬ್ಯಾರಿಯರ್ ಗಳನ್ನು ಅವಳವಡಿಸಲು ಬಿಡ್ ಕರೆಯಲಾಗಿದೆ.
Advertisement
Advertisement
ಬೆಂಗಳೂರು-ಮೈಸೂರು ಹೆದ್ದಾರಿಯ ಸುರಕ್ಷತಾ ತಪಾಸಣೆ ನಡೆಸಲು NHI ಕಳೆದ ವರ್ಷ ರಸ್ತೆ ಸುರಕ್ಷತಾ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರನ್ನು ಭೇಟಿ ಮಾಡಿ ರಸ್ತೆಯಲ್ಲಿ ಸುರಕ್ಷತೆ ಹೆಚ್ಚಿಸಲು ಹಾಗೂ ದೋಷಗಳನ್ನು ಸರಿಪಡಿಸಲು ಮನವಿ ಮಾಡಿದ್ದರು. ಇದನ್ನೂ ಓದಿ: ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ ನಿಯೋಜನೆ
Advertisement
ಕಳೆದ ಜುಲೈನಲ್ಲಿ ಲೋಕಸಭೆಯಲ್ಲಿ (Loksabha) ಕೇಂದ್ರ ಸರ್ಕಾರ ನೀಡಿದ ಮಾಹಿತಿಗಳ ಪ್ರಕಾರ, ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಜನವರಿ 2023 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಜುಲೈ ಅಂತ್ಯದ ವೇಳೆಗೆ 121 ಸಾವುಗಳು ಮತ್ತು 400 ಅಪಘಾತಗಳನ್ನು ಕಂಡಿದೆ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣವಾಗಿವೆ ಮತ್ತು ಜುಲೈನಿಂದ ಸಾವುಗಳು ಮತ್ತು ಅಪಘಾತಗಳು ಕಡಿಮೆಯಾಗಿದೆ ಎನ್ನಲಾಗಿದೆ.