ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಡಿ.7ರವರೆಗೆ ಜಾಹೀರಾತಿಗಾಗಿ ಒಟ್ಟು 5,200 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ.
ಜಾಹೀರಾತಿಗಾಗಿ ಸರ್ಕಾರ ಎಷ್ಟು ರೂಪಾಯಿ ಖರ್ಚು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಕೇಂದ್ರ ವಾರ್ತಾ ಹಾಗೂ ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಉತ್ತರವನ್ನು ನೀಡಿದ್ದಾರೆ.
Advertisement
Advertisement
2014 ರಿಂದ ಎನ್‍ಡಿಎ ಸರ್ಕಾರ ಇಲ್ಲಿಯವರೆಗೂ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಇತರೆ ಮಾಧ್ಯಮಗಳು ಮತ್ತು ಹೊರ ಭಾಗದ ಪ್ರಚಾರಕ್ಕೆಂದು ಒಟ್ಟು 5,200 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.
Advertisement
ಪ್ರಮುಖವಾಗಿ ಮುದ್ರಣ ಮಾಧ್ಯಮಕ್ಕೆ 2,282 ಕೋಟಿ ರೂ. ಆಡಿಯೋ ವಿಷ್ಯುಯಲ್ ಮಾಧ್ಯಮಕ್ಕೆ 2,212 ಕೋಟಿ ರೂ. ಹಾಗೂ ಹೊರಭಾಗದ ಪ್ರಚಾರಕ್ಕೆ 651 ಕೋಟಿ ರೂಪಾಯಿ ಖರ್ಚಾಗಿದೆ. 2014-15ರಲ್ಲಿ 978.98 ಕೋಟಿ ರೂ., 2015-16ರಲ್ಲಿ 1160.16 ಕೋಟಿ ರೂ., 2016-17ರಲ್ಲಿ 1,264.26 ಕೋಟಿ ರೂ., 2017-18ನೇ ಸಾಲಿನಲ್ಲಿ 1313.57 ಕೋಟಿ ಹಾಗೂ ಪ್ರಸಕ್ತ ಸಾಲಿನ ಡಿ.7ರವರೆಗೆ 527.96 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv