ನವದೆಹಲಿ: ಕೇಂದ್ರವು ಅಧಿಕ ತೆರಿಗೆ ಸಂಗ್ರಹಕ್ಕೆ ಒತ್ತು ಕೊಡುತ್ತಿದೆಯೇ ಹೊರತು ಜನರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
Advertisement
ನಾಳೆ ಬಜೆಟ್ ಅಧಿವೇಶನದ ಹಿನ್ನೆಲೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಆರ್ಥಿಕ ಸಮೀಕ್ಷೆ 2021-22 ಅನ್ನು ಮಂಡಿಸಿದರು. ಇದಕ್ಕೆ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ದೇಶದ ಜನರು ತೆರಿಗೆ ಹೊರೆಯಿಂದ ತೊಂದರೆಗೀಡಾಗಿದ್ದಾರೆ. ಆದರೆ ಮೋದಿ ಸರ್ಕಾರಕ್ಕೆ ತೆರಿಗೆ ಗಳಿಕೆಯೇ ದೊಡ್ಡ ಸಾಧನೆಯಾಗಿದೆ. ಅವರು ತಮ್ಮ ಸಂಪತ್ತನ್ನು ಮಾತ್ರ ನೋಡುತ್ತಾರೆ. ಜನರ ನೋವನ್ನು ನೋಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: Economic Survey 2022: ಹೊಸ ಹಣಕಾಸು ವರ್ಷಕ್ಕೆ ಶೇ.8-8.5 ಬೆಳವಣಿಗೆ ನಿರೀಕ್ಷೆ
Advertisement
देश की जनता टैक्स वसूली के बोझ से परेशान है जबकि मोदी सरकार के लिए ये टैक्स की कमाई एक बड़ी उपलब्धि है।
नज़रिए का अंतर है- उन्हें जनता का दर्द नहीं सिर्फ़ अपना ख़ज़ाना दिखता है।#EconomicSurvey2022
— Rahul Gandhi (@RahulGandhi) January 31, 2022
Advertisement
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಸಂಸತ್‍ನಲ್ಲಿ ಮಂಗಳವಾರ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷಾ ವರದಿಯನ್ನು ಇಂದು ಮಂಡಿಸಿದರು. 2022-23ರ ಆರ್ಥಿಕ ವರ್ಷದಲ್ಲಿ ದೇಶವು ಶೇ.8 ರಿಂದ ಶೇ.8.5ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಸಮೀಕ್ಷೆ ವರದಿಯಲ್ಲಿ ತಿಳಿಸಲಾಗಿದೆ.
Advertisement
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.9.2ರಷ್ಟು ಆರ್ಥಿಕ ಬೆಳವಣಿಗೆ ಅಂದಾಜಿಸಲಾಗಿದೆ. ಆದರೆ ಮುಂದಿನ ವರ್ಷದ ಆರ್ಥಿಕ ಬೆಳವಣಿಗೆ ಪ್ರಮಾಣ ಇದಕ್ಕಿಂತ ಕಡಿಮೆಯಾಗಲಿದೆ. ‘ಫ್ರೇಜಿಲ್ ಫೈವ್’ ರಾಷ್ಟ್ರಗಳಿಂದ ಭಾರತವು 4ನೇ ಅತಿದೊಡ್ಡ ವಿದೇಶಿ ವಿನಿಮಯ ಮೀಸಲು ಸ್ಥಾನಕ್ಕೆ ಬಂದಿದೆ. ಇದು ತಂತ್ರಗಾರಿಕೆಗೆ ನೀತಿ ಅವಕಾಶವನ್ನು ನೀಡುತ್ತದೆ ಎಂದು ವರದಿಯಲ್ಲಿದೆ. ಪರಿಣಾಮ ರಾಹುಲ್ ಗಾಂಧಿ ಅವರು, ನಿಮಗೆ ಆರ್ಥಿಕ ಅಭಿವೃದ್ಧಿಯಷ್ಟೆ ಮುಖ್ಯ, ಜನರ ಕಷ್ಟವಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಟೋಯಿಂಗ್ ವಾಹನ ಸಿಬ್ಬಂದಿ ಅಮಾನುಷವಾಗಿ ವರ್ತಿಸಿಲ್ಲ, ಅದೆಲ್ಲಾ ಸುಳ್ಳು: ಆರಗ ಜ್ಞಾನೇಂದ್ರ