ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ (Karnataka) ರಾಜ್ಯಕ್ಕೆ ತೆರಿಗೆ ಪಾಲಿನ (Tax Devolution) ಕಂತಿನ ರೂಪದಲ್ಲಿ 3,705 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿದೆ.
ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ಹಾಗೂ ಬಂಡವಾಳ ವೆಚ್ಚಕ್ಕೆ ಹೆಚ್ಚಿನ ಹಣ ತೊಡಗಿಸಲು ಅನುಕೂಲ ಮಾಡಲು ಒಟ್ಟು 1,01,603 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇದು ಅಕ್ಟೋಬರ್ 10 ರಂದು ಬಿಡುಗಡೆಯಾಗಬೇಕಿದ್ದ ಸಾಮಾನ್ಯ ಮಾಸಿಕ ಹಂಚಿಕೆ 81,735 ಕೋಟಿ ರೂ. ಜೊತೆಗೆ ಹೆಚ್ಚುವರಿಯಾಗಿದೆ ಎಂದು ಹೇಳಿದೆ. ಅತಿ ಹೆಚ್ಚು ಹಣ ಉತ್ತರ ಪ್ರದೇಶಕ್ಕೆ 18,227 ಕೋಟಿ ರೂ., ಚುನಾವಣೆ ನಡೆಯಲಿರುವ ಬಿಹಾರಕ್ಕೆ (Bihar) 10,219 ಕೋಟಿ ರೂ. ಹಂಚಿಕೆಯಾಗಿದೆ. ಇದನ್ನೂ ಓದಿ: 57 ಹೊಸ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಅಸ್ತು
ಯಾವ ರಾಜ್ಯಕ್ಕೆ ಎಷ್ಟು?
ಬಿಹಾರ: 10,219 ಕೋಟಿ ರೂ.
ಛತ್ತೀಸ್‌ಗಢ: 3,462 ಕೋಟಿ ರೂ.
ಗೋವಾ: 392 ಕೋಟಿ ರೂ.
ಗುಜರಾತ್: 3,534 ಕೋಟಿ ರೂ.
ಹರಿಯಾಣ: 1,111 ಕೋಟಿ ರೂ.
ಹಿಮಾಚಲ ಪ್ರದೇಶ: 843 ಕೋಟಿ ರೂ.
ಜಾರ್ಖಂಡ್: 3,360 ಕೋಟಿ ರೂ.
ಕರ್ನಾಟಕ: 3,705 ಕೋಟಿ ರೂ.
ಕೇರಳ: 1,956 ಕೋಟಿ ರೂ.
ಮಧ್ಯಪ್ರದೇಶ: 7,976 ಕೋಟಿ ರೂ.
ಮಹಾರಾಷ್ಟ್ರ: 6,418 ಕೋಟಿ ರೂ.
ಮಣಿಪುರ: 727 ಕೋಟಿ ರೂ.
ಮೇಘಾಲಯ: 779 ಕೋಟಿ ರೂ.
ಮಿಜೋರಾಂ: 508 ಕೋಟಿ ರೂ.
ನಾಗಾಲ್ಯಾಂಡ್: 578 ಕೋಟಿ ರೂ. ಇದನ್ನೂ ಓದಿ: RSS ಶತಮಾನೋತ್ಸವ – ಭಾರತ ಮಾತೆಯ ಚಿತ್ರವಿರುವ 100 ರೂ. ನಾಣ್ಯ ಬಿಡುಗಡೆ
ಒಡಿಶಾ: 4,601 ಕೋಟಿ ರೂ.
ಪಂಜಾಬ್: 1,836 ಕೋಟಿ ರೂ.
ರಾಜಸ್ಥಾನ: 6,123 ಕೋಟಿ ರೂ.
ಸಿಕ್ಕಿಂ: 394 ಕೋಟಿ ರೂ.
ತಮಿಳುನಾಡು: 4,144 ಕೋಟಿ ರೂ.
ತೆಲಂಗಾಣ: 2,136 ಕೋಟಿ ರೂ.
ತ್ರಿಪುರ:719 ಕೋಟಿ ರೂ.
ಉತ್ತರ ಪ್ರದೇಶ: 18,227 ಕೋಟಿ ರೂ.
ಉತ್ತರಾಖಂಡ: 1,136 ಕೋಟಿ ರೂ.
ಪಶ್ಚಿಮ ಬಂಗಾಳ: 7,644 ಕೋಟಿ ರೂ.