ನವದೆಹಲಿ: ಉಡುಪಿಯ (Udupi) ಕೊಡಚಾದ್ರಿ ಬೆಟ್ಟ (Kodachadri Hill) ಸೇರಿದಂತೆ ದೇಶಾದ್ಯಂತ ಸುಮಾರು 18 ಕಡೆಗಳಲ್ಲಿ ರೋಪ್‌ವೇ (Ropeway) ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಕರ್ನಾಟಕದ ಕೊಡಚಾದ್ರಿ ಬೆಟ್ಟಕ್ಕೆ ಸುಮಾರು 7 ಕಿ.ಮೀ ಉದ್ದದ ರೋಪ್‌ವೇಯನ್ನು ನಿರ್ಮಿಸಲು ಕೇಂದ್ರ ಯೋಜಿಸಿದೆ. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಾದ ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ, ತಮಿಳುನಾಡು, ಆಂಧ್ರಪ್ರದೇಶ, ತಮಿಳುನಾಡು, ಲೇಹ್, ಸೇರಿದಂತೆ ಒಟ್ಟು 18 ಕಡೆಗಳಲ್ಲಿ ರೋಪ್‌ವೇ ನಿರ್ಮಾಣದ ಯೋಜನೆ ಒಳಗೊಂಡಿದೆ.
Advertisement
Advertisement
ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಟ್ಟದ ಮೇಲಿರುವ ಪ್ರಾಚೀನ ಶಂಕರಾಚಾರ್ಯ ದೇವಾಲಯಕ್ಕೆ 1 ಕಿ.ಮೀ ಉದ್ದದ ರೋಪ್‌ವೇ, ಜಮ್ಮು ಪ್ರದೇಶದ ಮಾತಾ ವೈಷ್ಣೋ ದೇವಿ ದೇವಸ್ಥಾನದ ಬಳಿ ಶಿವಖೋರಿ ದೇವಸ್ಥಾನದವರೆಗೆ 2 ಕಿ.ಮೀ, ಪುಣೆಯ ರಾಜ್‌ಗಡ್ ಕೋಟೆಗೆ 1.4 ಕಿ.ಮೀ, ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನಕ್ಕೆ 2.3 ಕಿ.ಮೀ, ತೆಲಂಗಾಣದ ಈಗಳಪೆಂಟಾದಿಂದ ಕೃಷ್ಣಾ ನದಿಗೆ ಅಡ್ಡಲಾಗಿ, ಉತ್ತರ ಪ್ರದೇಶದ ಗಾಜಿಯಾಬಾದ್‌ನ ವೈಶಾಲಿ ಮೆಟ್ರೋ ನಿಲ್ದಾಣದಿಂದ ಮೋಹನ್ ನಗರ ಮೆಟ್ರೋ ನಿಲ್ದಾಣದವರೆಗೆ 10 ಕಿ.ಮೀ ಉದ್ದದ ರೋಪ್‌ವೇ ನಿರ್ಮಾಣದ ಬಗ್ಗೆಯೂ ಕೇಂದ್ರ ಮುಂದಾಗಿದೆ. ಇದನ್ನೂ ಓದಿ: ರಿಲಯನ್ಸ್ ಆಸ್ಪತ್ರೆಯನ್ನು ಸ್ಫೋಟಿಸುತ್ತೇನೆ- ಮುಖೇಶ್ ಅಂಬಾನಿ, ಕುಟುಂಬಸ್ಥರಿಗೆ ಜೀವ ಬೆದರಿಕೆ
Advertisement
Advertisement
ರೋಪ್‌ವೇ ಯೋಜನೆ ಯಾಕೆ?
ರೋಪ್‌ವೇ ಯೋಜನೆ ಕೇಬಲ್ ಕಾರ್‌ಗಳ (Cable Car) ಮೂಲಕ ಗಂಟೆಗೆ ಸುಮಾರು 6,000-8,000 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿಯೂ ನೇರ ರೇಖೆಯಲ್ಲಿ ನಿರ್ಮಿಸಬಹುದಾಗಿದೆ. ಇವು ಗಂಟೆಗೆ 15-30 ಕಿ.ಮೀ ವೇಗದಲ್ಲಿ ಸಾಗಬಲ್ಲುದಾಗಿದ್ದು, ಮೂಲ ಹಾಗೂ ಗಮ್ಯಸ್ಥಾನವನ್ನು ಸಂಪರ್ಕಿಸುವ ದೂರ ರಸ್ತೆ ಮಾರ್ಗಗಳಿಗಿಂತ ಕಡಿಮೆಯಾಗುತ್ತದೆ. ರೋಪ್‌ವೇಗಳು ಪ್ರವಾಸೋದ್ಯಮಕ್ಕೆ, ಗುಡ್ಡಗಾಡು ಪ್ರದೇಶಗಳಲ್ಲಿ ಪ್ರಯಾಣಕ್ಕೆ ಉತ್ತಮವಾಗಿರುವುದು ಮಾತ್ರವಲ್ಲದೇ ಆಕರ್ಷಕ ಸಾರಿಗೆ ವಿಧಾನವೂ ಆಗಿದೆ. ಇದನ್ನೂ ಓದಿ: ಸೇನೆಯ ಚೀತಾ ಹೆಲಿಕಾಪ್ಟರ್ ಪತನ- ಪೈಲಟ್ ಹುತಾತ್ಮ