ಮುಂಬೈ: ಪಾಕಿಸ್ತಾನದತ್ತ ಬೆರಳು ತೋರಿಸದೆ ಕಾಶ್ಮೀರಿ ಪಂಡಿತರಿಗೆ ಏನು ಮಾಡಬಹುದು ಎಂಬುದನ್ನು ಕೇಂದ್ರ ಸರ್ಕಾರ ಯೋಚಿಸಬೇಕು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಪಂಡಿತರೊಬ್ಬರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವುದನ್ನು ಖಂಡಿಸಿದರು. ಜಮ್ಮು- ಕಾಶ್ಮೀರದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಆದರೆ ಇಲ್ಲಿಯವರೆಗೆ ಅದನ್ನು ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಕಾಶ್ಮೀರಿ ಪಂಡಿತರ ಪುನರ್ವಸತಿ ಕುರಿತು ಮಾತುಕತೆ ನಡೆಯುತ್ತಿದೆ. ಆದರೆ ಕಳೆದ 7 ವರ್ಷಗಳಲ್ಲಿ ಏನಾಯಿತು. ಎಷ್ಟು ಕಾಶ್ಮೀರಿ ಪಂಡಿತರು ಕಾಶ್ಮೀರಕ್ಕೆ ಮರಳಿದ್ದಾರೆಂದು ನನಗೆ ತಿಳಿದಿಲ್ಲ. ಕಳೆದ 7 ವರ್ಷಗಳಲ್ಲಿ ಕಾಶ್ಮೀರಿ ಪಂಡಿತರಿರು ಎಷ್ಟು ಜನರು ವಾಪಸ್ಸಾದರಾದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಲು ಬಯಸುತ್ತೇವೆ : ವಿಕ್ರಮಸಿಂಘೆ
Advertisement
Don’t know how many Kashmiri Pandits returned to Kashmir in last 7 yrs. HM needs to think seriously about this. Let’s not keep pointing fingers at Pak, but see what can do for Kashmiri pandits: Shiv Sena leader Sanjay Raut on recent targeted killing of Kashmiri Pandit Rahul Bhat pic.twitter.com/I7ajjJBx10
— ANI (@ANI) May 13, 2022
ಕಾಶ್ಮೀರಿ ಪಂಡಿತರ ಪುನರ್ವಸತಿ ಮತ್ತು ಭದ್ರತೆಯ ವಿಷಯದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಧ್ವನಿವರ್ಧಕಗಳು ಮತ್ತು ಹನುಮಾನ್ ಚಾಲೀಸಾ ಕುರಿತು ನಡೆಯುತ್ತಿರುವ ಗಲಾಟೆಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ವಿರುದ್ಧ ಹೋರಾಡಿ, ರಮ್ಯಾ ವಿರುದ್ಧ ಅಲ್ಲ – ಡಿಕೆಶಿ ಬೆಂಬಲಿಗರಿಗೆ ಮಹದೇವಪ್ಪ ಟಾಂಗ್