ನವದೆಹಲಿ: ಭಾರತೀಯ ಸೇನೆ ಸೇರುವ ಮಂದಿಗೆ ಗುಡ್ನ್ಯೂಸ್. ಸೇನೆಯಲ್ಲಿ 4 ವರ್ಷಗಳ ಕಾಲ ಸೇವೆ ಸಲ್ಲಿಸುವ ವಿನೂತನ ʼಅಗ್ನಿಪಥ್ʼ ಯೋಜನೆಗೆ ಶೀಘ್ರವೇ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡುವ ಸಾಧ್ಯತೆಯಿದೆ.
ಟೂರ್ ಆಫ್ ಡ್ಯೂಟಿ ಪ್ರವೇಶ ಯೋಜನೆಯ ಅಡಿ ಮೂರು ಸೇನೆಗೆ ಯುವ ಜನತೆ ಸೇರಬಹುದಾಗಿದೆ. ಈ ಯೋಜನೆಯ ಅಡಿ ಸೈನಿಕರನ್ನು ಅಲ್ಪಾವಧಿಯ ಒಪ್ಪಂದದ ಮೇಲೆ ನೇಮಿಸಿಕೊಳ್ಳಲಾಗುತ್ತದೆ. ತರಬೇತಿ ನೀಡಿದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ನಿಯೋಜಿಸಲಾಗುತ್ತದೆ. ಇದನ್ನೂ ಓದಿ: ಭಾರತೀಯ ಸೇನೆ ಹೊಸ ಸಮವಸ್ತ್ರ ಅನಾವರಣ – ಏನಿದರ ವಿಶೇಷತೆ?
Advertisement
Advertisement
ಹೇಗಿರಲಿದೆ ಈ ಯೋಜನೆ?
ಆಯ್ಕೆಗೊಂಡ ಅಭ್ಯರ್ಥಿಗಳಿಗೆ 6 ತಿಂಗಳು ತರಬೇತಿ ನೀಡಲಾಗುತ್ತದೆ. ಸೈನ್ಯಕ್ಕೆ ಸೇರ್ಪಡೆಯಾದವರ ಪೈಕಿ ಶೇ. 20-25ರಷ್ಟು ಅಭ್ಯರ್ಥಿಗಳನ್ನು ಮುಂದುವರಿಸಲಾಗುತ್ತದೆ. 4 ವರ್ಷ ಪೂರ್ಣಗೊಂಡ ಬಳಿಕ ಬಿಡುಗಡೆಯಾಗುತ್ತಿರುವ ಸೈನಿಕರಿಗೆ 10 -12 ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತದೆ.
Advertisement
ಈಗಾಗಲೇ ಸಿದ್ಧಪಡಿಸಿದ ಪ್ಲ್ಯಾನ್ ನಿಗದಿಯಂತೆ ನಡೆದರೆ ಮುಂದಿನ ಮೂರು ತಿಂಗಳಿನಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ಕೋವಿಡ್ 19 ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಎರಡು ವರ್ಷಗಳಿಂದ ಭಾರತೀಯ ಸೈನ್ಯ ಸ್ಥಗಿತಗೊಳಿಸಿದೆ.