ಬೆಂಗಳೂರು: ಓಲಾ, ಊಬರ್ (Ola, Uber) ಸೇರಿದಂತೆ ಕೆಲ ಅಗ್ರಿಗೇಟರ್ ಕಂಪನಿಗಳು ಜನರಿಂದ ವಸೂಲಿಗಿಳಿದಿದ್ದವು. ಖಾಸಗಿ ಕ್ಯಾಬ್ ಸೇವೆಗಳ ಹಾವಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಭಾರತ್ ಟ್ಯಾಕ್ಸಿ (Bharat Taxi) ನವೆಂಬರ್‌ನಿಂದ ಆರಂಭವಾಗ್ತಿದೆ. ಕೇಂದ್ರದ ಸಹಕಾರದಿಂದ ಆರಂಭವಾಗ್ತಿರೋ ಈ ಕ್ಯಾಬ್ ಸರ್ವೀಸ್‌ಗೆ ರಾಜ್ಯದ ಚಾಲಕ ಸಂಘಟನೆಗಳು ವೆಲ್‌ಕಮ್‌ಗೆ ಮಾಡಿವೆ.
ಖಾಸಗಿ ಅಗ್ರಿಗ್ರೇಟರ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಭಾರತ್ ಟ್ಯಾಕ್ಸಿ ಮುಂದಿನ ತಿಂಗಳಿನಿಂದಲೇ ರೋಡ್‌ಗೆ ಇಳಿಯುತ್ತಿದೆ. ಮೊದಲ ಬಾರಿಗೆ ದೆಹಲಿಯಲ್ಲಿ ‘ಭಾರತ್ ಟ್ಯಾಕ್ಸಿ’ ಸೇವೆ ಆರಂಭವಾಗಲಿದೆ. ಕೇಂದ್ರ ಸರ್ಕಾರದ ಸಹಕಾರ ಸಚಿವಾಲಯದ ಮಾರ್ಗದರ್ಶನದಲ್ಲಿ ಈ ಹೊಸ ಟ್ಯಾಕ್ಸಿ ಸೇವೆಗೆ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಖಾಸಗಿ ಅಗ್ರಿಗ್ರೇಟರ್ ಕಂಪನಿಗಳ ಅನಾನುಕೂಲತೆಗಳಿಂದ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಕೇಂದ್ರವು ಸಹಕಾರಿ ಟ್ಯಾಕ್ಸಿ ಸೇವೆ ಆರಂಭಿಸಿದೆ. ಇದನ್ನೂ ಓದಿ: ರಸ್ತೆಗಳಲ್ಲಿ ಬಟರ್ ಫ್ಲೈ ಲೈಟ್ ಹಾಕಿದ್ದೇವೆಂದು 73 ಲಕ್ಷ ಹಣ ಪಡೆದು ಗುಳುಂ; ಗೋಲ್ಮಾಲ್ ಬಹಿರಂಗ
ಮೊದಲು 650 ಟ್ಯಾಕ್ಸಿಗಳನ್ನ ಪ್ರಾಯೋಗಿಕವಾಗಿ ರಸ್ತೆಗೆ ಇಳಿಯಲಿದೆ. ಡಿಸೆಂಬರ್‌ನಲ್ಲಿ ಸೇವೆಯನ್ನ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಲಾಗುವುದು. ಪುರುಷ ಹಾಗೂ ಮಹಿಳಾ ಚಾಲಕರು ಸೇರಿದಂತೆ ಒಟ್ಟಾರೆ 5 ಸಾವಿರ ಚಾಲಕರು ಮುಂದಿನ ದಿನಗಳಲ್ಲಿ ಮುಂಬೈ, ಪುಣೆ, ಭೋಪಾಲ್ , ಲಖನೌನಲ್ಲಿ ಟ್ಯಾಕ್ಸಿ ಸೇವೆ ಒದಗಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರು | ಪತಿಯ ಚಿತ್ರಹಿಂಸೆ ತಾಳಲಾರದೇ 3ನೇ ಮಹಡಿಯಿಂದ ಜಿಗಿದ ಮಹಿಳೆ
ಈ ಭಾರತ್ ಟ್ಯಾಕ್ಸಿ ಸೇವೆಯನ್ನ ರಾಜ್ಯದ ವಿವಿಧ ಚಾಲಕ ಸಂಘಟನೆಗಳು ಸ್ವಾಗತಿಸಿವೆ. ಅದ್ರಲ್ಲೂ ಹೆಚ್ಚಾಗಿ ಏರ್ಪೋರ್ಟ್‌ಗಳಲ್ಲಿ ಟ್ಯಾಕ್ಸಿ ಬಳಕೆಯಾಗುತ್ತಿದ್ದು, ಕೇಂದ್ರದ ಈ ಯೋಜನೆಗೆ ಬೃಹತ್ ಬೆಂಗಳೂರು ಟ್ಯಾಕ್ಸಿ ಡ್ರೈವರ್ ಯೂನಿಯನ್ ಸ್ವಾಗತಿಸಿದೆ. ಹಲವಾರು ಚಾಲಕರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ. ಕಡಿಮೆ ದರಕ್ಕೆ ಪ್ರಯಾಣಿಕರಿಗೆ ಸಿಗಲಿ, ಬೇಗ ಜಾರಿಯಾಗಲಿ. ಜೊತೆಗೆ ಸಕ್ಸಸ್ ಆಗಲಿ ಅಂತಾ ಅಸೋಸಿಯೇಷನ್ ಹೇಳಿದೆ.
ಇನ್ನೂ ಆದರ್ಶ ಆಟೋ ಅಸೋಸಿಯೇಷನ್ ಸಹ ಭಾರತ್ ಟ್ಯಾಕ್ಸಿ ಸೇವೆ ಸ್ವಾಗತಿಸಿದೆ. ರಾಜ್ಯದಲ್ಲೂ ಬೇಗ ಜಾರಿಯಾಗಲಿ, ಸರ್ಕಾರದ ವತಿಯಿಂದ ಟ್ಯಾಕ್ಸಿ ಓದಗಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿದೆ, ಇದ್ರಿಂದ ಚಾಲಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.


