ನವದೆಹಲಿ: ಟಿಬೆಟನ್ ಧರ್ಮಗುರು ದಲೈ ಲಾಮಾ (Tibetan Spiritual leader Dalai Lama) ಅವರಿಗೆ ಜೀವ ಬೆದರಿಕೆ ಇರುವುದರಿಂದ ಕೇಂದ್ರ ಸರ್ಕಾರವು ‘ಜೆಡ್’ ಶ್ರೇಣಿಯ ಭದ್ರತೆಯನ್ನು (Z Category Protection) ಒದಗಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿದೆ.
89 ವರ್ಷದ ಆಧಾತ್ಮಿಕ ನಾಯಕನಿಗೆ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವಾಲಯವು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ವಿಐಪಿ ಭದ್ರತಾ ವಿಭಾಗಕ್ಕೆ ಸೂಚಿಸಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: Manipur | ಬಿರೇನ್ ಸಿಂಗ್ ರಾಜೀನಾಮೆ ಬೆನ್ನಲ್ಲೇ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ
ದಲೈ ಲಾಮಾ ಅವರು ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಹೊಂದಿದ್ದರು. ಆದ್ರೆ ದೆಹಲಿ ಮತ್ತು ಇತರ ಯಾವುದೇ ಸ್ಥಳಗಳಿಗೆ ಭೇಟಿ ನೀಡುವಾಗ ಪೊಲೀಸ್ ಭದ್ರತೆಯನ್ನು ವಿಸ್ತರಿಸಲಾಗುತ್ತಿತ್ತು. ಆದ್ರೆ ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಏಕರೂಪದ ಭದ್ರತೆಗೆ ಸೂಚನೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳ ತಂಡವು ದಲೈ ಲಾಮಾಗೆ ರಕ್ಷಣೆ ನೀಡಲಿದೆ. ಅಲ್ಲದೇ ಮಣಿಪುರದ ಬಿಜೆಪಿ ನಾಯಕ ಸಂಬಿತ್ ಪಾತ್ರ ಅವರಿಗೂ ʻಜೆಡ್ʼ ಶ್ರೇಣಿಯ ಭದ್ರತೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೈಕಾಲು ಕಟ್ಟಿ, ಕಂಪಾಸ್‌ನಿಂದ ಚುಚ್ಚಿ ಚಿತ್ರಹಿಂಸೆ – ನರ್ಸಿಂಗ್ ಕಾಲೇಜಿನಲ್ಲಿ ರ‍್ಯಾಗಿಂಗ್ ಕ್ರೂರತೆಯ ವಿಡಿಯೋ ವೈರಲ್