ಬೆಂಗಳೂರು: ದೇಶಾದ್ಯಂತ ಪಿಎಫ್‍ಐ (PFI) 5 ವರ್ಷ ಬ್ಯಾನ್ ಆದ ಬೆನ್ನಲ್ಲೇ ಎಸ್‍ಡಿಪಿಐ (SDPI), ಪಿಎಫ್‍ಐನಂತಹ ಸಂಘಟನೆಗಳು ಮಗ್ಗುಲ ಮುಳ್ಳಾಗಿ ವೋಟ್ ಬ್ಯಾಂಕ್ ಛಿದ್ರ ಮಾಡುವ ಆತಂಕ ‘ಕೈ’ ಪಾಳಯವನ್ನು ಕಾಡ್ತಿದ್ಯಾ ಎಂಬ ಅನುಮಾನ ಎದ್ದಿದೆ.
ಅಂದು ಪಿಎಫ್‍ಐ ಸಂಘಟನೆಯ ಮೇಲಿದ್ದ ಕೇಸು ವಾಪಸ್ ಪಡೆದ ಕಾಂಗ್ರೆಸ್ (Congress) ಇದೀಗ ಕೋಮು ಮತ್ತು ಜಾತಿ ಲೆಕ್ಕಾಚಾರ ಮಾಡ್ತಿದ್ಯಾ ಎಂಬ ಅನುಮಾನ ಎದ್ದಿದೆ. ಈ ಹಿಂದೆಯೇ ಪಕ್ಷದ ಮುಸ್ಲಿಂ ಮುಖಂಡರಿಗೆ ಕಮ್ಯೂನಿಟಿ ಅವೇರ್ನೆಸ್ ಮಾಡಲು ಸೂಚಿಸಿತ್ತು. ಆದರೆ, ಪಕ್ಷದ ಸೂಚನೆ ಮರೆತ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರನ್ನು ಎಚ್ಚರಿಸಲು ಮತ್ತೆ ಕೈ ಪಾಳಯ ಮುಂದಾಗಿದ್ದು, ಮುಸ್ಲಿಂ ಸಂಘಟನೆಗಳ ಆಕ್ಟಿವಿಟಿ ಹಾಗೂ ಅದರತ್ತ ಸಮುದಾಯ ಒಲವು ಹೊಂದದಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್
ವಿಶೇಷವಾಗಿ ಕರಾವಳಿ ಭಾಗದಲ್ಲಿ ಆಕ್ಷನ್ ಪ್ಲಾನ್ ಸಿದ್ಧಪಡಿಸಿ ವರದಿ ನೀಡಲು ಸೂಚಿಸಿದ್ದು, ಈ ಹಿಂದೆಯೂ ಬಿಜೆಪಿ (BJP) ಹಿಂದುತ್ವದ ದಾಳ ಉರುಳಿಸಿದಾಗಲು ಕೈ ನಾಯಕರಿಗೆ ಸೂಚನೆ ನೀಡಲಾಗಿತ್ತು. ಆದರೆ, ಆಗ ಶಾಸಕರು ಆಸಕ್ತಿಯಿಂದ ಕೆಲಸ ಮಾಡಲಿಲ್ಲ. ಈಗ ಇದನ್ನು ಹೀಗೆ ಬಿಟ್ಟರೇ ಬಿಜೆಪಿ ಪಾಲಿಗೆ ಹಿಂದುತ್ವದ ವೋಟ್ ಬ್ಯಾಂಕ್ ಪಾಲಿಟಿಕ್ಸ್‌ಗೆ ನೆರವಾಗಲಿದೆ. ಆದ್ದರಿಂದ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಎಂದು ಪಕ್ಷದಿಂದಲೇ ಟಾಸ್ಕ್ ನೀಡಲಾಗಿದೆ ಎಂಬ ಮಾತು ಆಪ್ತ ಮೂಲಗಳಿಂದ ಕೇಳಿ ಬರುತ್ತಿದೆ. ಇದನ್ನೂ ಓದಿ: PFI ಮೇಲೆ ದಾಳಿ – ಸಿದ್ದು ಸರ್ಕಾರದಿಂದ ಕೇಸ್ ವಾಪಸ್, ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ