ನವದೆಹಲಿ: ಅಸುರಕ್ಷಿತ ನೋವು ನಿವಾರಕ ಮಾತ್ರೆಗಳ ಮೇಲೆ ಕೇಂದ್ರ ಸರ್ಕಾರ ವಾರ್ ನಡೆಸಿದೆ.
ಸಾರಿಡಾನ್ ಸೇರಿದಂತೆ ಸ್ಕಿನ್ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾರ್ಮ್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಸೇರಿದಂತೆ 328 ಮಾತ್ರೆ, ಔಷಧಿಗಳ ತಯಾರಿಕೆ, ಮಾರಾಟದ ಮೇಲೆ ತತ್‍ಕ್ಷಣದ ನಿಷೇಧ ಹೇರಿದೆ. ಅಲ್ಲದೆ, 6 ಪೇನ್ ಕಿಲ್ಲರ್ ಟ್ಯಾಬ್ಲೆಟ್‍ಗಳ ಮೇಲೆ ತಕ್ಷಣದ ನಿರ್ಬಂಧ ಹೇರಿ ಕೇಂದ್ರ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಎರಡು ವರ್ಷಗಳಿಂದ ದೇಶದ ಹಲವು ಹೈಕೋರ್ಟ್‍ಗಳು ಹಾಗೂ ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಲೇ ಇತ್ತು. ಈ ಮಧ್ಯೆ, ಇದೀಗ ಎರಡು ವರ್ಷಗಳ ಅವಧಿಯಲ್ಲಿ ಔಷಧಿಗಳಲ್ಲಿ ಬಳಸುವ ಅಂಶಗಳನ್ನು ಶೇ.2ರಷ್ಟು ಪ್ರಮಾಣವನ್ನು ಕಡಿತಗೊಳಿಸಿದ್ದೇವೆ ಅಂತ ಕಂಪನಿಗಳು ವಾದಿಸಿದ್ದವು. ಆರೋಗ್ಯ ಇಲಾಖೆ ಮತ್ತು ಔಷಧಿ ತಯಾರಕ ಕಂಪನಿಗಳ ನಡುವೆ 2016ರಿಂದ ನಡೆಯುತ್ತಿದ್ದ ಡ್ರಗ್ಸ್ ಯುದ್ಧ ನಡೆಯುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv