ನವದೆಹಲಿ: ಉಕ್ರೇನ್ ಸಂಕಷ್ಟದ ಸಂದರ್ಭದಲ್ಲಿ ಭಾರತಕ್ಕೆ ಮರಳಿ ಬರುತ್ತಿರುವ ಪ್ರಯಾಣಿಕರಿಗೆ ಕೋವಿಡ್-19 ನಿರ್ಬಂಧಗಳಲ್ಲಿ ವಿನಾಯಿತಿ ನೀಡಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗಿನಿಂದ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರು ತಾಯ್ನಾಡಿಗೆ ಮರಳಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಭಾರತ ಸರ್ಕಾರ ಸಾವಿರಾರು ಭಾರತೀಯರನ್ನು ಕರೆ ತರುವ ಕೆಲಸ ಮಾಡುತ್ತಿದೆ. ಇದೇ ವೇಳೆ ಆರೋಗ್ಯ ಸಚಿವಾಲಯ ಕೋವಿಡ್ ನಿಯಮಾವಳಿಗಳಿಗೆ ಕೊಂಚ ಬ್ರೇಕ್ ನೀಡಿದೆ. ಇದನ್ನೂ ಓದಿ: ಯುರೋಪಿಯನ್ ಒಕ್ಕೂಟದ ಶಾಶ್ವತ ಸದಸ್ಯತ್ವಕ್ಕೆ ಅರ್ಜಿ ಹಾಕಿದ ಉಕ್ರೇನ್
Advertisement
Advertisement
ತುರ್ತು ಪರಿಸ್ಥಿತಿಯಲ್ಲಿ ಉಕ್ರೇನ್‍ನಿಂದ ಭಾರತಕ್ಕೆ ಮರಳುವವರಿಗೆ ಪ್ರೀ-ಬೋರ್ಡಿಂಗ್ ಆರ್‍ಟಿಪಿಸಿಆರ್ ಪರೀಕ್ಷೆ ಹಾಗೂ ಲಸಿಕಾ ಪ್ರಮಾಣ ಪತ್ರವನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಸೋಮವಾರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಮೂಲಕ ಕೋವಿಡ್ ನಿಯಮಾವಳಿಗೆ ಸ್ವಲ್ಪ ಮಟ್ಟಿನ ವಿನಾಯಿತಿ ದೊರಕಿದೆ. ಇದನ್ನೂ ಓದಿ: ರಷ್ಯಾದಿಂದ ಶೆಲ್, ರಾಕೆಟ್ ದಾಳಿ – ಉಕ್ರೇನ್‍ನಿಂದ 4 ಲಕ್ಷ ಮಂದಿ ಮಹಾವಲಸೆ?
Advertisement
ಫೆಬ್ರವರಿ 28ರ ವರೆಗೆ 6 ವಿಮಾನಗಳು ಉಕ್ರೇನ್‍ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆ ತಂದಿದ್ದು, ಅದರಲ್ಲಿ ಸುಮಾರು 1,400 ಪ್ರಯಾಣಿಕರಿದ್ದರು. 1 ವಿಮಾನ ಮುಂಬೈಗೆ ಮರಳಿದ್ದು, ಉಳಿದ ವಿಮಾನಗಳು ದೆಹಲಿಗೆ ಬಂದಿಳಿದಿವೆ. ಆದರೆ ಇಲ್ಲಿ ವರೆಗೆ ಯಾರೊಬ್ಬರನ್ನೂ ಪ್ರತ್ಯೇಕವಾಗಿ ಇರಿಸಲಾಗಿಲ್ಲ ಎಂದು ಸರ್ಕಾರ ತಿಳಿಸಿದೆ.