ನವದೆಹಲಿ: ದೇಶದಲ್ಲಿ ಕೋವಿಡ್ – 19 ಲಸಿಕೆಯ ಬೂಸ್ಟರ್ ಡೋಸ್‍ಗಳನ್ನು ನೀಡಲು ಕೇಂದ್ರ ಸರ್ಕಾರ ನನ್ನ ಸಲಹೆಯನ್ನು ಅಂಗೀಕರಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಈ ಕುರಿತಂತೆ ರಾಹುಲ್ ಗಾಂಧಿ ಅವರು, ಬೂಸ್ಟರ್ ಡೋಸ್ ವಿಚಾರವಾಗಿ ಕೆಂದ್ರ ಸರ್ಕಾರ ನನ್ನ ಸಲಹೆಯನ್ನು ಒಪ್ಪಿಕೊಂಡಿದೆ. ಇದು ಸರಿಯಾದ ಹೆಜ್ಜೆಯಾಗಿದೆ. ಲಸಿಕೆಗಳು ಮತ್ತು ಬೂಸ್ಟರ್ ಡೋಸ್ಗಳು ಸುರಕ್ಷತವಾಗಿ ದೇಶದ ಜನರಿಗೆ ತಲುಪಬೇಕು ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ
केंद्र सरकार ने बूस्टर डोज़ का मेरा सुझाव मान लिया है- ये एक सही क़दम है। देश के जन-जन तक वैक्सीन व बूस्टर की सुरक्षा पहुँचानी होगी।#BoosterJab #VaccinateIndia https://t.co/wUW7eYhEme
— Rahul Gandhi (@RahulGandhi) December 26, 2021
ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು, ಕೊಮೊರ್ಬಿಡಿಟಿ ಹೊಂದಿರುವವರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಶಿಫಾರಸಿನ ಮೇರೆಗೆ 2022ರ ಜನವರಿ 10 ರಿಂದ ಬೂಸ್ಟರ್ ಡೋಸ್‍ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಿಸಿದ್ದರು.
ಈ ಮುನ್ನ ಡಿಸೆಂಬರ್ 22ರಂದು ರಾಹುಲ್ ಗಾಂಧಿ ಅವರು ದೇಶದಲ್ಲಿ ಬೂಸ್ಟರ್ ಡೋಸ್ ನೀಡುವಂತೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದರು.ನಮ್ಮ ದೇಶದಲ್ಲಿರುವ ಬಹಳಷ್ಟು ಮಂದಿ ಇನ್ನೂ ಲಸಿಕೆಯನ್ನು ಪಡೆದಿಲ್ಲ. GOI ಯಾವಾಗ ಬೂಸ್ಟರ್ ಡೋಸ್‍ಗಳನ್ನು ನೀಡಲು ಪ್ರಾರಂಭಿಸುತ್ತದೆ ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ