ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಬಹುನಿರೀಕ್ಷೆಯ ಹುಬ್ಬಳ್ಳಿ (Hubballi) -ಅಂಕೋಲಾ (Ankola) ರೈಲುಮಾರ್ಗಕ್ಕೆ (Train) ಮತ್ತೆ ಅಡಚಣೆ ಉಂಟಾಗಿದ್ದು, ಪರಿಷ್ಕೃತ ಯೋಜನೆ ಸಿದ್ಧಪಡಿಸಬೇಕೆಂದು ಕೇಂದ್ರ ವನ್ಯಜೀವಿ ಮಂಡಳಿಯ ಸಮಿತಿ ಅಭಿಪ್ರಾಯಪಟ್ಟಿದೆ.
ಈಗಿರುವ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕೆಲವು ಬದಲಾವಣೆಯನ್ನು ಮಾಡಿ ಪರಿಷ್ಕೃತ ಪ್ರಸ್ತಾಪ ಸಲ್ಲಿಸಬೇಕು. ಈಗಿರುವ ಯೋಜನೆ ಪ್ರಸ್ತಾಪ ದೊಡ್ಡ ಮಟ್ಟದ ಅರಣ್ಯನಾಶಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಯೋಜನೆಯನ್ನು ಸಂಪೂರ್ಣ ತೆಗೆದುಹಾಕುವ ಕುರಿತು ಹೇಳದೇ ಇರುವುದರಿಂದ ಮತ್ತೊಮ್ಮೆ ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗದ ಕನಸು ಚಿಗುರೊಡೆದಿದೆ.
Advertisement
Advertisement
ಈ ಹಿಂದೆ ರೈಲ್ವೆ ಸಚಿವಾಲಯ ಜಂಟಿಯಾಗಿ ಸಭೆ ನಡೆಸಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಮಂತ್ರಾಲಯದ ಅಧಿಕಾರಿಗಳು, ರಾಜ್ಯ ಸರ್ಕಾರ, ಧಾರವಾಡದ ಪರಿಣಿತರು, ಐಐಎಸ್ ಅಧಿಕಾರಿಗಳು ಸೇರಿದಂತೆ ವನ್ಯಜೀವಿ ಮಂಡಳಿಯ ಎಡಿಜಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಸಿ, ವಿಸ್ತೃತ ಚರ್ಚೆ ನಡೆಸಿದ ನಂತರ ಅಂತಿಮ ಹಂತದ ಯೋಜನೆ ಪ್ರಸ್ತಾವ ಸಲ್ಲಿಕೆಯಾಗಲಿದೆ ಎಂದಿತ್ತು. ಇದನ್ನೂ ಓದಿ: 9 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಗೇಟ್‌ಪಾಸ್ – ನಿತಿನ್ ಗಡ್ಕರಿ
Advertisement
Advertisement
ರಾಷ್ಟ್ರೀಯ ವನ್ಯಜೀವಿ ಮಂಡಳಿ ಕೋರಿಕೆಯಂತೆ 7 ಸದಸ್ಯರ ತಂಡ ರಚನೆ ಮಾಡಿ ಕಳೆದ ಡಿ. 26ರಂದು ಕೇಂದ್ರ ವನ್ಯಜೀವಿ ಮಂಡಳಿಯ ಸಮಿತಿಗೆ ತಂಡ ವಿಸ್ತೃತ ವರದಿ ಸಲ್ಲಿಸಿತ್ತು. ಇದನ್ನೂ ಓದಿ: ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k