ಮುಂಬೈ: ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನೊಳಗೆ ಮಹಿಳೆಯೊಬ್ಬರು ಕೆಟಲ್ ಬಳಸಿ ಮ್ಯಾಗಿ ತಯಾರಿಸಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಮಹಿಳೆಯೊಬ್ಬರು ರೈಲಿನ ಎಸಿ ಕೋಚ್‌ನೊಳಗೆ ಪ್ರಯಾಣಿಸುವಾಗ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಅನ್ನು ಪ್ಲಗ್ ಮಾಡಿ, ಮ್ಯಾಗಿ ತಯಾರಿಸಿಕೊಂಡಿದ್ದಾರೆ. ಮಹಿಳೆ ಮ್ಯಾಗಿ ತಯಾರಿಸುತ್ತಿರುವುದನ್ನು ಸಹ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. ಅದಲ್ಲದೇ ವಿಡಿಯೋಗೆ ಫೋಸ್ ಕೊಡುತ್ತಾ ಮ್ಯಾಗಿ ಮಾಡುತ್ತಿರುವುದನ್ನು ತೋರಿಸಿದ್ದಾರೆ.ಇದನ್ನೂ ಓದಿ: Telangana | ಪೌರಕಾರ್ಮಿಕನ ಶವದೊಂದಿಗೆ ಡಿಸಿ ಕಚೇರಿಯಲ್ಲಿ ಪ್ರತಿಭಟನೆ – ಪೊಲೀಸರಿಂದ ಲಾಠಿ ಚಾರ್ಜ್
ಮರಾಠಿಯಲ್ಲಿ ಮಾತನಾಡುವ ಮಹಿಳೆ, ಕೆಟಲ್‌ನಲ್ಲಿಯೇ 10-15 ಜನರಿಗೆ ಚಹಾ ಕೂಡ ತಯಾರಿಸಿರುವುದಾಗಿ ಹೇಳಲಾಗಿದೆ. ಸದ್ಯ ಮಹಿಳೆ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ರೈಲ್ವೆ ಕಾಯ್ದೆಯ ಸೆಕ್ಷನ್ 147(1)ರ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಹೇಳಿದೆ.
