ನವದೆಹಲಿ: ಒಂದೇ ತಿಂಗಳಿನಲ್ಲಿ ಟಿಕೆಟ್ ಇಲ್ಲದೆ ಹಾಗೂ ಅನಿಯಮಿತ ಪ್ರಯಾಣಿಕರಿಂದ ಈ ಬಾರಿ ರೈಲ್ವೇ ಇಲಾಖೆಯು ದಾಖಲೆಯ ದಂಡ ವಸೂಲಿ ಮಾಡಿದೆ.
ರೈಲ್ವೇ ಅಧಿಕಾರಿಗಳು ಏಪ್ರಿಲ್ ನಿಂದ ಮೇ ವೆರೆಗೆ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಬರೋಬ್ಬರಿ 42.15 ಕೋಟಿ ರೂ. ದಂಡ ಪಡೆದಿದ್ದಾರೆ. ಈ ಮೊತ್ತ ಕಳೆದ ಬಾರಿಗಿಂತ 2.25% ಹೆಚ್ಚಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ.
Advertisement
ಟಿಕೆಟ್ ಇಲ್ಲದೆ ಪ್ರಯಾಣಿಸುವ ಹಾಗೂ ನಿಯಮ ಉಲ್ಲಂಘಿಸಿ ಪ್ರಯಾಣಿಸುತ್ತಿದ್ದ ಪ್ರಕರಣಗಳು ಕಳೆದ ಬಾರಿಗಿಂತ 4.70% ಹೆಚ್ಚಳವಾಗಿದೆ. 2018ರ ಫೆಬ್ರವರಿ-ಏಪ್ರಿಲ್ ಅವಧಿಯಲ್ಲಿ 7.25 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ಬಾರಿ 7.59 ಲಕ್ಷ ಪ್ರಕರಣಗಳು ದಾಖಲಾಗಿದ್ದು, 42.15 ಕೋಟಿ ರೂ. ದಂಡ ಇಲಾಖೆ ಕೈ ಸೇರಿದೆ.
Advertisement
7.59 ಲಕ್ಷ ಪ್ರಕರಣಗಳಲ್ಲಿ 1,517 ಪ್ರಕರಣಗಳು ರಿಸರ್ವೇಶನ್ ಟಿಕೆಟ್ ವರ್ಗಾವಣೆ ಪತ್ತೆಯಾಗಿದ್ದು, ಅವರಿಂದ 12.77 ಲಕ್ಷ ರೂ. ದಂಡ ಪಡೆಯಲಾಗಿದೆ ಎಂಬುದಾಗಿ ವರದಿಯಾಗಿದೆ.