ನವದೆಹಲಿ: ಪ್ರಸ್ತುತ ಅಸ್ತಿತ್ವದಲ್ಲಿರುವ ದೇಶದ ಪ್ರಮುಖ ನಗರಗಳ (Cities) ಮೇಲಿನ ಹೊರೆಯನ್ನು ತಗ್ಗಿಸುವ ಪ್ರಯತ್ನದಲ್ಲಿ ಕೇಂದ್ರ ಹೊಸ 8 ನಗರಗಳನ್ನು (New Cities) ಸ್ಥಾಪಿಸಲು ಯೋಜನೆ ನಡೆಸಿರುವುದಾಗಿ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ದೇಶದಲ್ಲಿ 8 ಹೊಸ ನಗರಗಳನ್ನು ಅಭಿವೃದ್ಧಿಪಡಿಸಲು 15ನೇ ಹಣಕಾಸು ಆಯೋಗ ಶಿಫಾರಸು ಮಾಡಿರುವುದಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂಬಿ ಸಿಂಗ್ ತಿಳಿಸಿದ್ದಾರೆ.
Advertisement
Advertisement
‘ಅರ್ಬನ್ 20’ ಹೆಸರಿನ ಸಭೆಯಲ್ಲಿ ಮಾತನಾಡಿರುವ ಸಿಂಗ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಆಯೋಗದ ಮಹತ್ವದ ಶಿಫಾರಸಿನ ಬಳಿಕ ವಿವಿಧ ರಾಜ್ಯಗಳು ತಡ ಮಾಡದೇ ತಮ್ಮ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಇಂತಹ ಒಟ್ಟು 26 ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದ್ದು, ಜಾಗರೂಕತೆಯಿಂದ ಪರಿಶೀಲನೆ ಮತ್ತು ವಿಶ್ಲೇಷಣೆ ನಡೆಸಿದ ಬಳಿಕ 8 ನಗರಗಳನ್ನು ಅಭಿವೃದ್ಧಿಪಡಿಸಲು ಮುಂದಾಗಬಹುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುಪ್ರೀಂಕೋರ್ಟ್ ಜಡ್ಜ್ ಆಗಿ ಪ್ರಶಾಂತ್ ಮಿಶ್ರಾ, ಕೆವಿ ವಿಶ್ವನಾಥನ್ ಪ್ರಮಾಣ ವಚನ ಸ್ವೀಕಾರ
Advertisement
Advertisement
ಅಸ್ತಿತ್ವದಲ್ಲಿರುವ ನಗರಗಳು ತಮ್ಮ ನಾಗರಿಕರ ಬೇಡಿಕೆಗಳನ್ನು ಪೂರೈಸಲು ಹೆಣಗಾಡುತ್ತಿವೆ ಎಂಬ ಅಂಶದ ಕಾರಣಕ್ಕೆ ಹೊಸ ನಗರಗಳನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ. ಕೊನೆಯಲ್ಲಿ ಸರ್ಕಾರ ಆಯ್ಕೆಗೊಳಿಸಿದ 8 ಪ್ರದೇಶಗಳನ್ನು ಅಭಿವೃದ್ಧಿಗೆ ಉದ್ದೇಶಿತ ಸಮಯಾವಧಿಯೊಂದಿಗೆ ಸರಿಯಾದ ಸಮಯದಲ್ಲಿ ಬಹಿರಂಗಪಡಿಸುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ರಾಜಕೀಯ ಒತ್ತಡದ ನಡುವೆಯೂ IPL ವೀಕ್ಷಿಸಿ ರಿಲ್ಯಾಕ್ಸ್ ಆದ ನೂತನ ಸಿಎಂ ಸಿದ್ದರಾಮಯ್ಯ